Mysore
26
clear sky

Social Media

ಬುಧವಾರ, 25 ಮಾರ್ಚ್ 2026
Light
Dark

ಕೇಂದ್ರ ಸರ್ಕಾರ ರೈತರ ಮೂಗಿಗೆ ತುಪ್ಪ ಸವರುವ ಬಜೆಟ್ ಮಂಡಿಸಿದೆ: ರೈತ ಹಳ್ಳಿಕೆರೆಹುಂಡಿ ಭಾಗ್ಯರಾಜ್

ಮೈಸೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಬಜೆಟ್‌ ರೈತರ ಮೂಗಿಗೆ ತುಪ್ಪ ಸವರುವ ಬಜೆಟ್‌ ಆಗಿದೆ ಎಂದು ರೈತ ಮುಖಂಡ ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಇದು ರೈತರ ಅಭಿವೃದ್ಧಿಗೆ ಪೂರಕವಲ್ಲದ ಬಜೆಟ್ ಆಗಿದೆ. ರೈತ ಬೆಳೆದ ಬೆಳೆಗಳಿಗೆ ಎಂಎಸ್‌ಪಿ ಖಾತ್ರಿ ಕಾಯ್ದೆಯ ಜಾರಿ ಬಗ್ಗೆ ಕ್ರಮ ಕೈಗೊಂಡಿಲ್ಲ. ಬಜೆಟ್‌ನಲ್ಲಿ ಸ್ವಾಮಿನಾಥನ್‌ ವರದಿ ಜಾರಿಯ ಬಗ್ಗೆ ಕ್ರಮ ಕೈಗೊಂಡಿಲ್ಲ. ರೈತರ ಸಾಲ ಮನ್ನದ ಪ್ರಸ್ತಾಪವಿಲ್ಲ. ಕೃಷಿ ಸಾಲದ ನೀತಿ ರೈತನ ಹೊಲದಲ್ಲಿನ ಕಬ್ಬಿನ ದರದ ಬಗ್ಗೆ ಪ್ರಸ್ತಾಪವಿಲ್ಲ. ರೈತರ ಬೆಳೆ ವಿಮೆ ನೀತಿಯನ್ನು ವೈಯಕ್ತಿಕ ವಿಮೆ ರೀತಿ ಜಾರಿಗೆ ತರಬೇಕಾಗಿತ್ತು. ರೈತರ ಕೃಷಿ ಉತ್ಪನ್ನಗಳನ್ನು. ವರ್ಷಪೂರ್ತಿ ಖರೀದಿ ಕೇಂದ್ರಗಳ ಆರಂಭಕ್ಕೆ ಕ್ರಮ ಕೈಗೊಂಡಿಲ್ಲ. ಎಲ್ಲಾ ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ. ಬೆಲೆ ಕುಸಿತವಾದಾಗ ಖರೀದಿ ಮಾಡುವ ಯೋಜನೆಯನ್ನು ಪ್ರಕಟಣೆ ಮಾಡಿಲ್ಲ. ಕೇವಲ ತೆಂಗು ಗೋಡಂಬಿ ಶ್ರೀಗಂಧ ಬೆಳೆಗೆ ಮಾತ್ರ ವಿಶೇಷ ಗಮನಹರಿಸಿ ರೈತರ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Tags:
error: Content is protected !!