ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ ಬಹುರೂಪಿ ನಾಟಕೋತ್ಸವ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಮೈಸೂರಿನ ರಂಗಾಯಣದ ಆವರಣದಲ್ಲಿ ರಂಗೋತ್ಸವ ನಡೆಯುತ್ತಿದ್ದು, ಎರಡನೇ ದಿನವಾದ ಇಂದು ಜನರಲ್ಲಿ ನಿರಾಸಕ್ತಿ ಮೂಡಿದೆ ಎನ್ನಲಾಗುತ್ತಿದೆ. ಬೆಳಿಗ್ಗೆ ಹಾಗೂ ಮಧ್ಯಾಹ್ನ ನಡೆಯುವ ಚಲನಚಿತ್ರೋತ್ಸವಕ್ಕೆ ಜನರು ಬಾರದ ಹಿನ್ನೆಲೆಯಲ್ಲಿ ರಂಗಾಯಣದ ಆವರಣ ಬಿಕೋ ಎನ್ನುತ್ತಿದೆ. ಬೆಳಗ್ಗೆ 10.30 ರಿಂದ 12, 12 ರಿಂದ 1.30 ಮತ್ತು 2 ರಿಂದ 4.30ರವರೆಗೆ ಚಲನಚಿತ್ರೋತ್ಸವ ನಡೆಯಲಿದ್ದು, ಶ್ರೀರಂಗದಲ್ಲಿ ನಡೆಯುತ್ತಿರುವ ಪ್ರೀಡಂ ಈಸ್ ಬ್ಯೂಟಿಫುಲ್ ಚಲನಚಿತ್ರ ಪ್ರದರ್ಶನ ನಡೆಯಲಿದೆ. ಬೆರಳೆಣಿಕೆಯಷ್ಟು ಮಂದಿ ಮಾತ್ರ ಚಲನಚಿತ್ರ ವೀಕ್ಷಣೆ ಮಾಡುತ್ತಿದ್ದು, ಸಂಜೆ ನಡೆಯುವ ನಾಟಕಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ನಾಟಕಾಸಕ್ತರು ಬರುವ ನಿರೀಕ್ಷೆಯಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ವೀಕ್ಷಕರು, ನಿನ್ನೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ರಜೆಯಿದ್ದ ಹಿನ್ನೆಲೆಯಲ್ಲಿ ನಾಟಕೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿದ್ರು. ಇಂದು ಬದ್ದತೆ ಇರುವವರು ಮಾತ್ರ ಬಂದಿದ್ದಾರೆ. ಆಮೇಲೆ ಪ್ರಚಾರದ ಕೊರತೆನೂ ಇರಬಹುದು. ಇವತ್ತು ದರ್ಶನ್ ಸಂಕ್ರಾಂತಿ ಹಬ್ಬ ಆಚರಿಸಿದ್ರು ಎಂದು ಹೆಡ್‌ಲೈನ್ ಸುದ್ದಿ ಮಾಡುತ್ತಾರೆ. ಾದರೆ ನಾಟಕೋತ್ಸವದಂತಹ ಉಪಯುಕ್ತ ಮಾಹಿತಿಗಳನ್ನು ಮಾಧ್ಯಮಗಳು ಜನರಿಗೆ ತಿಳಿಸುವ ಕೆಲಸ ಮಾಡಲ್ಲ ಎಂದು ಬೇಸರ ವ್ಯಕ್ತಪಡಿಸಿದರು.





