ಮೈಸೂರು: ಲಿಫ್ಟ್ ಕೆಟ್ಟು ನಿಂತ ಪರಿಣಾಮ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕೆಲಕಾಲ ಪರದಾಟ ನಡೆಸಿದ ಘಟನೆ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ನಡೆದಿದೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ದಿ ಸೆಂಟರ್ ಫಾರ್ ಫ್ಯೂಚರ್ ಸ್ಕಿಲ್ಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದ್ದು, ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ರಾಜ್ಯಪಾಲರು ಲಿಫ್ಟ್ ಮೂಲಕ ತೆರಳಿದ್ದರು. ಈ ವೇಳೆ ಲಿಫ್ಟ್ ಓವರ್ ಲೋಡ್ ಆದ ಪರಿಣಾಮ ಆಫ್ ಆಗಿ ಕೈಕೊಟ್ಟಿತ್ತು.
6 ಮಂದಿ ಹೊರುವ ಸಾಮರ್ಥ್ಯ ಹೊಂದಿದ್ದ ಲಿಫ್ಟ್‌ನಲ್ಲಿ ರಾಜ್ಯಪಾಲರೊಂದಿಗೆ 10 ಮಂದಿ ತೆರಳಿದ್ದರು. ಓವರ್ ಲೋಡ್ ಆಗಿ ಲಿಫ್ಟ್ ಕೆಟ್ಟು ನಿಂತ ಪರಿಣಾಮ ಲಿಫ್ಟ್‌ನಲ್ಲೇ ರಾಜ್ಯಪಾಲ ಗೆಹ್ಲೋಟ್ ಕೆಲಕಾಲ ಸಿಲುಕಿಕೊಂಡಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿ ತೀವ್ರ ಆತಂಕಕ್ಕೊಳಗಾಗಿದ್ದರು.
ತಕ್ಷಣ ಎಚ್ಚೆತ್ತ ಸಿಬ್ಬಂದಿ ಲಿಫ್ಟ್‌ನಿಂದ ರಾಜ್ಯಪಾಲರನ್ನು ಕೆಳಗಿಳಿಸಿದರು. ಈ ವೇಳೆ ಲಿಫ್ಟ್ ಬೇಡವೆಂದ ರಾಜ್ಯಪಾಲರು ನಡೆದುಕೊಂಡೇ ಕಾರ್ಯಕ್ರಮಕ್ಕೆ ತೆರಳಿದ ಘಟನೆ ನಡೆಯಿತು.





