Mysore
29
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

10 ವಾರ್ಡ್‌ಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದ ಸೈಯದ್‌ ಇಕ್ಬಾಲ್‌

ಮೈಸೂರು: ಅಜೀಜ್‌ ಸೇಠ್‌ ಬ್ಲಾಕ್‌ ಕಾಂಗ್ರೆಸ್‌ ಆಧ್ಯಕ್ಷ ಸೈಯದ್‌ ಇಕ್ಬಾಲ್‌ ಅವರು ನೂತನ 10 ವಾರ್ಡ್‌ಗಳಿಗೆ ಅಧ್ಯಕ್ಷರುಗಳನ್ನು ನೇಮಕ ಮಾಡಿದ್ದಾರೆ.

ಮೈಸೂರು ನಗರ ಕಾಂಗ್ರೆಸ್‌ನ ಅಜೀಜ್‌ ಸೇಠ್‌ ಬ್ಲಾಕ್‌ನ ಗಾಂಧಿನಗರ ವಿಭಾಗದ ಎಸ್.ಶರತ್‌ ಅವರನ್ನು ಸೇರಿದಂತೆ ವಿವಿಧ ವಾರ್ಡ್‌ಗಳ ನೂತನ 10 ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್‌ ಸೇಠ್‌ ಅನುಮೋದನೆ ಮೇರೆಗೆ ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್.ಮೂರ್ತಿ ಹಾಗೂ ಅಜೀಜ್‌ ಸೇಠ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸೈಯದ್‌ ಇಕ್ಬಾಲ್‌ ಅವರು ಅಧ್ಯಕ್ಷರುಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಅದರಲ್ಲಿ ಪ್ರಮುಖವಾಗಿ, ಶರತ್‌, ಜುಬೇರ್‌ ಅಹಮ್ಮದ್‌, ಮೇರಿ, ಅಲ್ಲಾ ಬಕಷ್‌, ಮೇರಾಜುಲ್‌ ಹುಸೇನ್‌ ಅಲಿಯಾಸ್‌ ಹಕೀಂ ಹಬೀಬ್‌, ರಫೀಕ್‌ ಅಹಮ್ಮದ್‌, ವಸೀಂ ಅಹಮ್ಮದ್‌, ಖಲೀಂ ಉಲ್ಲಾ, ಮೊಹಮ್ಮದ್‌ ಖಲೀಲ್‌, ನಸ್ರೀನ್‌ ಬಾನು ಅವರನ್ನು ಅಧ್ಯಕ್ಷರುಗಳನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

Tags: