Mysore
28
clear sky

Social Media

ಮಂಗಳವಾರ, 17 ಮಾರ್ಚ್ 2026
Light
Dark

ವಿದ್ಯಾರ್ಥಿಗಳೇ ಮಾದಕ ವಸ್ತುಗಳಿಂದ ದೂರವಿರಿ : ಕಮಿಷನರ್‌ ಸೀಮಾ ಲಾಟ್ಕರ್‌

ಮೈಸೂರು : ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿದ್ದು, ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಟ್ಟು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಕಿವಿಮಾತು ಹೇಳಿದರು.

ನಗರದ ಓವೆಲ್ ಮೈದಾನದಲ್ಲಿ ಮಹಾರಾಣಿ ಮಹಿಳಾ ಕಲಾ ಕಾಲೇಜು ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಪ್ರಿನ್ಸೆಸ್ ಅಥ್ಲೆಟಿಕ್ಸ್ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆಯ ಸೋಲು-ಗೆಲುವು ಜೀವನಕ್ಕೆ ಪಾಠವಿದ್ದಂತೆ. ಸೋಲಾಗಲಿ, ಗೆಲುವಾಗಲಿ ಉತ್ತಮ ಮಾರ್ಗದಲ್ಲಿ ಸಾಗುವುದನ್ನು ಕಲಿಯರಿ ಎಂದರು.

ಹೆಣ್ಣು ಮಕ್ಕಳಲ್ಲಿ ಹಳ್ಳಿ ಹೆಣ್ಣುಮಕ್ಕಳು ಸಿಟಿ ಹೆಣ್ಣುಮಕ್ಕಳು ಎಂಬುದಿಲ್ಲ. ಹೆಣ್ಣು ಮಕ್ಕಳೆಂದರೆ ಸ್ಟ್ರಾಂಗ್. ಹೆಣ್ಣು ಮಕ್ಕಳು ಪ್ರಶ್ನೆ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕ್ರೀಡೆಗಳು ಬಲವಾದ ವ್ಯಕ್ತಿತ್ವ ಮತ್ತು ವೃತ್ತಿಜೀವನ ನಿರ್ಮಿಸಲು ಸಹಾಯ ಮಾಡುತ್ತವೆ. ಜೀವನದಲ್ಲಿ ಶಿಸ್ತನ್ನು ಬೆಳಸುವಲ್ಲಿ ಮತ್ತು ಸಕ್ರಿಯವಾಗಿರಿಸುವಲ್ಲಿ ಕ್ರೀಡೆ ಪ್ರಮುಖ ಪಾತ್ರವಹಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಂ.ಎಸ್.ಅನಿತಾ, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ.ಎಸ್.ಮೋಹನ್ ಕುಮಾರ್, ವ್ಯವಸ್ಥಾಪಕ ಕೆ.ವೆಂಕಟೇಶ್ ಮತ್ತಿತರರು ಹಾಜರಿದ್ದರು.

 

Tags:
error: Content is protected !!