ಪ್ರಶಾಂತ್ ಎನ್ ಮಲ್ಲಿಕ್
ಮೈಸೂರು: ಸರ್ಕಾರದ ಕೆಟ್ಟ ನೀತಿಯನ್ನು ಜನರಿಗೆ ಮುಟ್ಟಿಸುವ ಮೂಲಕ ಇಡೀ ರಾಜ್ಯಾದ್ಯಂತ ಪ್ರತಿಭಟನೆ ಯಾತ್ರೆ ಮಾಡುತ್ತಿದ್ದೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರದ ಬೆಲೆ ಏರಿಕೆ, ಮುಸ್ಲಿಂ ಮೀಸಲಾತಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಈ ಸರ್ಕಾರವನ್ನು ಯಾಕಾದರೂ ತಂದಿದ್ದೇವೆ ಎಂಬ ಪಾಪ ಪ್ರಜ್ಞೆ ಜನರಿಗೆ ಕಾಡುತ್ತಿದೆ. ಸರ್ಕಾರದ ಕೆಟ್ಟ ನೀತಿಯನ್ನು ಜನರಿಗೆ ಮುಟ್ಟಿಸುವ ಮೂಲಕ ಇಡೀ ರಾಜ್ಯಾದ್ಯಂತ ಪ್ರತಿಭಟನೆ ಯಾತ್ರೆ ಮಾಡುತ್ತಿದ್ದೇವೆ. ಸಿದ್ದರಾಮಯ್ಯರದ್ದು ಅಲಿಬಾಬನ ಸರ್ಕಾರ. ಟಿಪ್ಪು ಸಂಸ್ಕೃತಿಯನ್ನ ಜಾರಿಗೆ ತರುತ್ತಿದ್ದಾರೆ. ಹಿಂದು ಬಗ್ಗೆ ಮಾತನಾಡಿದರೆ ಕೋಮುವಾದ ಅಂತಾರೆ. ಮುಸ್ಲಿಂ ಬಗ್ಗೆ ಮಾತಾಡಿದರೆ ಜಾತ್ಯಾತೀತ ಅಂತಾರೆ. ಸರ್ಕಾರ ಪಾಪರ್ ಆಗಿದೆ. ತೆರಿಗೆ ವಿಧಿಸುವ ಮೂಲಕ ಲೂಟಿ ಮಾಡುತ್ತಿದೆ. ಇದೆಲ್ಲದರ ವಿರುದ್ಧ ಹೋರಾಟ ಮಾಡುವ ನಿಟ್ಟಿನಲ್ಲಿ ನಾವು ಮುಂದಾಗಿದ್ದೇವೆ ಎಂದು ಹೇಳಿದರು.