ಮೈಸೂರು: ಮುಕ್ತ ವಿಶ್ವವಿದ್ಯಾನಿಲಯದ ಕೊಠಡಿಗೆ ಹಣದ ಹಾರ ಹಾಕಿ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದ್ದಾರೆ.
ಮುಕ್ತ ವಿಶ್ವವಿದ್ಯಾನಿಲಯದ ಕುಲಸಚಿವರಾಗಿರುವ ಕೆ.ಬಿ.ಪ್ರವೀಣ್ ಅವರು ವರ್ಗಾವಣೆ ಹಾಗೂ ಪದನಾಮ ಬದಲಾವಣೆ ಸೇರಿದಂತೆ ಎಲ್ಲದಕ್ಕೂ ಹಣ ಕೇಳುತ್ತಿದ್ದಾರೆ ಎಂದು ಆರೋಪಿಸಿರುವ ಸಿಬ್ಬಂದಿಗಳು ಇಂದು ಅವರ ಕಚೇರಿಗೆ ಹಣದ ಹಾರ ಹಾಕಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಹಣ ಕೊಡಲ್ಲ ಎಂದು ಹೇಳಿದರೂ ಬಿಡದ ಪ್ರವೀಣ್ ಅವರು, ಹೆದರಿಸಿ, ಬೆದರಿಸಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಸಿಬ್ಬಂದಿಗಳು ಗಂಭೀರ ಆರೋಪ ಮಾಡಿದ್ದಾರೆ. ಇನ್ನು ನಿಯಮಗಳನ್ನು ಉಲ್ಲಂಘಿಸಿ ಅಕ್ರಮ ನೇಮಕಾತಿ ಮಾಡಿಕೊಳ್ಳುತ್ತಿರುವ ಆರೋಪ ಕೂಡ ಕೂಡ ಕೇಳಿಬಂದಿದ್ದು, ಕುಲಸಚಿವರ ಕೊಠಡಿಗೆ ಹಣದ ಹಾರ ಹಾಕಿ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.





