Mysore
29
few clouds

Social Media

ಭಾನುವಾರ, 01 ಫೆಬ್ರವರಿ 2026
Light
Dark

ಕೆಆರ್‌ಎಸ್‌ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ನಾಮಕರಣ ವಿವಾದ: ಪ್ರಿನ್ಸೆಸ್‌ ರಸ್ತೆಯ ಸ್ಟೀಕರ್‌ ರಾತ್ರೋರಾತ್ರಿ ತೆರವು

ಮೈಸೂರು: ನಗರದ ಕೆಆರ್‌ಎಸ್‌ ರಸ್ತೆಗೆ ಸಿದ್ದರಾಮಯ್ಯ ಅವರ ಹೆಸರಿಡುವ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧ ವ್ಯಕ್ತಪಡಿಸಿ ರಸ್ತೆಯ ಅಲ್ಲಲ್ಲಿ ನಿನ್ನೆ ಸಂಜೆ ಅಂಟಿಸಿದ್ದ ಪ್ರಿನ್ಸೆಸ್‌ ಸ್ಟೀಕರ್‌ ಅನ್ನು ರಾತ್ರೋರಾತ್ರಿ ತೆರವುಗೊಳಿಸಲಾಗಿದೆ.

ಕೆಆರ್‌ಎಸ್‌ ರಸ್ತೆಗೆ ಸಿಎಂ ಸಿದ್ದರಾಮಯ್ಯ ಅವರ ಹೆಸರನ್ನು ನಾಮಕರಣ ಮಾಡುವ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆಯೇ ಕರ್ನಾಟಕ ರಾಷ್ಟ್ರ ಸೇನೆ, ಇನ್ನಿತರ ಕೆಲ ಸಂಘಟನೆಗಳ ಕಾರ್ಯಕರ್ತರು ಈ ರಸ್ತೆಯ ಹಲವು ಭಾಗಗಳಲ್ಲಿ ಬುಧವಾರ(ಜನವರಿ.1) ಸಂಜೆಯ ವೇಳೆ ಪ್ರಿನ್ಸೆಸ್‌ ರಸ್ತೆ ಎಂಬ ಸ್ಟೀಕರ್‌ ಅಂಟಿಸಿ ಪೂಜೆ ಸಲ್ಲಿದ್ದರು.

ಈ ಸ್ಟೀಕರ್‌ಅನ್ನು ಕೆಆರ್‌ಎಸ್‌ ರಸ್ತೆಯ ಚೆಲುವಾಂಬ ಪಾರ್ಕ್‌ ಪ್ರತಿಮೆಯ ಬಳಿ ಹಾಗೂ ರಸ್ತೆಯ ಅನೇಕ ಕಡೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಮತ್ತು ಕೃಷ್ಣಾಜಮ್ಮಣ್ಣಿ ಭಾವಚಿತ್ರವನ್ನು ಪ್ರಿನ್ಸೆಸ್‌ ಎಂಬ ನಾಮಫಲಕವಿರುವಂತೆ ಅಂಟಿಸಲಾಗಿತ್ತು. ಆದರೆ ಈ ಸ್ಟೀಕರ್‌ಗಳನ್ನು ರಾತ್ರೋರಾತ್ರಿ ತೆರವುಗೊಳಿಸಿದ್ದಾರೆ. ಅದನ್ನು ತೆರವುಗೊಳಿಸಿದವರು ಯಾವುದಾದರೂ ಸಂಘಟನೆಯ ಕಾರ್ಯಕರ್ತರ ಅಥವಾ ಬೇರೆಯವರ ಎಂಬುದು ತಿಳಿದು ಬಂದಿಲ್ಲ.

Tags:
error: Content is protected !!