ಮೈಸೂರು: ಜಿಲ್ಲೆಯ ಗುಂಗ್ರಛತ್ರದ ಕೊಪ್ಪಲಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಜಯರಾಮ್ ಅವರಿಗೆ ಸಂಘದ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು. ಜೊತೆಯಲ್ಲಿ ಪತ್ನಿ ಜಾನಕಮ್ಮ ಮಕ್ಕಳಾದ ರಾಣಿ, ಪ್ರೇಮ್ ಕುಮಾರ್, ಸುನಿತಾ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷರು ಮಾಜಿ ಜಿಲ್ಲಾ ಸದಸ್ಯರಾದ ಅರುಣ್ ಕುಮಾರ್,ವಿಸ್ತರಣಾಧಿಕಾರಿ ಡಾ. ಶಿವಕುಮಾರ್, ಉಪಾಧ್ಯಕ್ಷ ಡಿಸಿ ನಾಗರಾಜ್, ಸಂಘದ ಪದಾಧಿಕಾರಿಗಳು , ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.