Mysore
29
scattered clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಬಾಲನಟ ರೋಹಿತ್‌ ಆರೋಗ್ಯ ಸ್ಥಿರ

ಮೈಸೂರು: ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಾಷ್ಟ್ರಪ್ರಶಸ್ತಿ ವಿಜೇತ ಬಾಲನಟ ರೋಹಿತ್‌ ಅವರ ಆರೋಗ್ಯ ಈಗ ಸ್ಥಿರವಾಗಿದೆ.

ರೋಹಿತ್‌ ದವಡೆ ಭಾಗಕ್ಕೆ ಶಸ್ತ್ರ ಚಿಕಿತ್ಸೆ ಮಾಡಿ ಪ್ಲೇಟ್‌ ಅಳವಡಿಸಲಾಗಿದ್ದು, 8 ತಿಂಗಳು ದ್ರವ ಆಹಾರ ಸೇವಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ರೋಹಿತ್‌ ತಾಯಿ ಛಾಯಾಲಕ್ಷ್ಮೀ ಅವರಿಗೂ ಗಂಭೀರ ಗಾಯಗಳಾಗಿದ್ದು, ಬೆಂಗಳೂರಿಗೆ ಶಿಫ್ಟ್‌ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಅಪಘಾತವಾದಾಗ ರಸ್ತೆ ಬಳಿ ನಿಂತಿದ್ದ ರೋಹಿತ್‌, ರಕ್ತ ಸುರಿಯುತ್ತಿದ್ದರೂ ಧೃತಿಗೆಡಲಿಲ್ಲ ಎಂದು ಸಂಬಂಧಿಕರು ಹೇಳಿದ್ದಾರೆ.

ಪಾಂಡವಪುರ ನಿವಾಸಿಯಾಗಿರುವ ರೋಹಿತ್‌ ಅವರಿಗೆ ʼಒಂದಲ್ಲಾ ಎರಡಲ್ಲಾʼ ಚಿತ್ರದ ನಟನೆಗಾಗಿ ರಾಷ್ಟ್ರಪ್ರಶಸ್ತಿ ಬಂದಿತ್ತು. ಇವರು ದರ್ಶನ್‌ ಅಭಿನಯದ ಕಾಟೇರಾ ಚಿತ್ರದಲ್ಲೂ ಅಭಿನಯಿಸಿದ್ದಾರೆ.

ಶ್ರೀರಂಗಪಟ್ಟಣದ ಪಾಲಹಳ್ಳಿ ಬಳಿ ಈ ಅಪಘಾತ ಸಂಭವಿಸಿದ್ದು, ಪ್ರಕರಣ ಸಂಬಂಧ ಶ್ರೀರಂಗಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags: