ಮೈಸೂರು: ಇಲ್ಲಿನ ಅಗ್ರಹಾರದ ಶೃಂಗೇರಿ ಶಾರದಾಂಬೆ ದೇಗುಲದ ಬಳಿ ನಿತ್ರಾಣಗೊಂಡು ಕೆಳಗೆ ಬಿದ್ದಿದ್ದ ಹದ್ದನ್ನು ಪಕ್ಷಿ ಸಂರಕ್ಷಕ ಡಾ ಅಜಯ್ ಕುಮಾರ್ ರಕ್ಷಣೆ ಮಾಡಿದ್ದಾರೆ.

ಸುಸ್ತಾಗಿ ಕೆಳಗೆ ಬಿದ್ದು ಒದ್ದಾಡುತ್ತಿದ್ದ ಹದ್ದಿಗೆ ಹಿರಿಯ ವಕೀಲ ಎಚ್.ಎನ್.ವೆಂಕಟೇಶ್ ಎಂಬುವವರು ನೀರು ಕುಡಿಸಿ, ಪಕ್ಷಿ ಸಂರಕ್ಷಕ ಡಾ ಅಜಯ್ ಕುಮಾರ್‌ಗೆ ಕರೆ ಮಾಡಿ ಮಾಹಿತಿ ನೀಡಿದರು.
ಇದನ್ನೂ ಓದಿ:- ʻಪಿನಾಕ’ ನನ್ನ ವೃತ್ತಿ ಬದುಕಿನಲ್ಲೇ ಒಂದು ವಿಭಿನ್ನ ಚಿತ್ರ: ಗಣೇಶ್
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಡಾ. ಅಜಯ್ ಕುಮಾರ್ ಅವರು, ಹದ್ದಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು. ಚಿಕಿತ್ಸೆ ಬಳಿಕ ಚೇತರಿಸಿಕೊಂಡ ಹದ್ದನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿಕಿತ್ಸಾಲಯಕ್ಕೆ ತೆಗೆದುಕೊಂಡು ಹೋಗಲಾಯಿತು.





