ಮೈಸೂರು: ನಾಡಿನೆಲ್ಲೆಡೆ ರಾಮನವಮಿಯ ಸಂಭ್ರಮ ಮನೆಮಾಡಿದ್ದು, ಮೈಸೂರಿನ ಪುರಾತನ ರಾಮಮಂದಿರದಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ.
ಮೈಸೂರಿನ ಶಿವರಾಂಪೇಟೆಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣ ಮಾಡಿರುವ ರಾಮನ ದೇವಾಲಯ ಇದಾಗಿದ್ದು, ರಾಮನವಮಿಯ ಅಂಗವಾಗಿ ಇಂದು ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಲಾಗಿದೆ.
ರಾಮ, ಲಕ್ಷ್ಮಣ, ಸೀತೆ ಹಾಗೂ ಹನುಮಂತನಿಗೆ ಇಂದು ರಾಮನವಮಿಯ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಗಿದ್ದು, ಇಂದು ಮುಂಜಾನೆಯಿಂದಲೇ ರಾಮನಿಗೆ ವಿಶೇಷ ಅಭಿಷೇಕ ಹಾಗೂ ಪೂಜೆ ಪುನಸ್ಕಾರ ನೆರವೇರಿಸಲಾಗಿದೆ.
ರಾಮನವಮಿಯ ಅಂಗವಾಗಿ ದೇವಾಲಯಕ್ಕೆ ಬಂದ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ರಾಮನ ದರ್ಶನ ಪಡೆದು ಪುನೀತರಾದರು. ಜೊತೆಗೆ ರಾಮನ ಭಜನೆ ಹಾಡುವ ಮೂಲಕ ರಾಮನನ್ನು ಮನದಲ್ಲೇ ನೆನೆದು, ಮರ್ಯಾದ ಪುರುಷೋತ್ತಮನ ಜಪ ಮಾಡಿದರು.
ದೇವಾಲಯಕ್ಕೆ ಬಂದ ಎಲ್ಲಾ ಸಾರ್ವಜನಿಕರಿಗೂ ಮಜ್ಜಿಗೆ, ಪಾನಕ ಹಾಗೂ ಕೋಸಂಬರಿ ವಿತರಣೆ ಮಾಡಲಾಯಿತು.





