ಮೈಸೂರು: ಪಾರಂಪರಿಕ ಕಟ್ಟಡದ ಬಳಿ ಸಿಗರೇಟ್ ಸೇದುತ್ತಾ ರಜತ್ ಫೋಟೋಶೂಟ್ ಮಾಡಿಸಿದ್ದು, ಬಿಗ್‌ಬಾಸ್ ಹುಡುಗನ ಹುಚ್ಚಾಟಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಪಾರಂಪರಿಕ ಕಟ್ಟಡವಾದ ಹಳೇ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಬಳಿ ರಜತ್ ಸಿಗರೇಟ್ ಸೇದುತ್ತಾ ಕಾರಿನಿಂದ ಇಳಿಯುವ ವಿಲನ್ ಲುಕ್ಕಿನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಎರಡು ರೀತಿಯ ಫೋಟೋಶೂಟ್ ಮಾಡಿಸಿ ತಮ್ಮ ಅಧಿಕೃತ ಇನ್ಸ್‌ಸ್ಟಾಗ್ರಾಮ್ ಖಾತೆಗೆ ಶೇರ್ ಮಾಡಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುವುದು ನಿಷೇಧ. ಈ ಎಲ್ಲಾ ವಿಷಯಗಳು ಗೊತ್ತಿದ್ದರೂ ರಜತ್ ಶೋಕಿಗಾಗಿ ರೀಲ್ಸ್ ಮಾಡಿ ಫೋಟೊಶೂಟ್ ಮಾಡಿಸಿದ್ದಾರೆ.
ಈ ಹಿಂದೆ ಶೂಟಿಂಗ್ ಸೆಟ್‌ನಲ್ಲಿ ಮಚ್ಚು ಹಿಡಿದು ಫೋಟೋಶೂಟ್ ಮಾಡಿಸಿಕೊಂಡು ಜೈಲಿಗೆ ಹೋಗಿ ಬೇಲ್ ಮೇಲೆ ಹೊರಬಂದಿದ್ದರು. ಆದರೂ ಬುದ್ಧಿ ಕಲಿಯದ ರಜತ್ ಈಗ ಮತ್ತೊಮ್ಮೆ ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಮಾಡಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.





