Mysore
20
broken clouds

Social Media

ಸೋಮವಾರ, 26 ಜನವರಿ 2026
Light
Dark

ಕನ್ನಡಪರ ಹೋರಾಟಗಾರ ಸ.ರ.ಸುದರ್ಶನ್‌ (73) ವಿಧಿವಶ

sudharshan

ಮೈಸೂರು: ಕನ್ನಡ ಪರ ಹೋರಾಟಗಾರ ಹಾಗೂ ರಾಮಕೃಷ್ಣನಗರದ ನೃಪತುಂಗ ಕನ್ನಡ ಶಾಲೆಯ ಸ್ಥಾಪಕರಲ್ಲೊಬ್ಬರಾದ ಸ.ರ.ಸುದರ್ಶನ್‌ ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ಸ.ರ.ಸುದರ್ಶನ್‌ ಅವರು ವಿಜಯನಗರದ ತಮ್ಮ ಮನೆಯಲ್ಲಿ ಇಂದು ಬೆಳಿಗ್ಗೆ ಸುಮಾರು 8 ಗಂಟೆಯ ಸಮಯದಲ್ಲಿ ನಿಧನರಾದರು ಅವರಿಗೆ ಒಬ್ಬರೇ ಪುತ್ರಿ ಎಂಜಿನಿಯರ್ ಹಾಗೂ ರಂಗ ಕಲಾವಿದೆ ನುಡಿ ಸುದರ್ಶನ್ ಇದ್ದಾರೆ.

ಐವತ್ತು ವರ್ಷಗಳ ಹಿಂದೆಯೇ ಮೊದಲ ಬಾರಿಗೆ ಕನ್ನಡ ಚಳುವಳಿಯಲ್ಲಿ ಸುದರ್ಶನ್ ಪಾಲ್ಗೊಂಡಿದ್ದರು. ಅಂದಿನಿಂದ ಇಂದಿನವರೆಗೆ ಸತತವಾಗಿ ಕನ್ನಡ ಚಳುವಳಿಯಲ್ಲಿ ಭಾಗಿಯಾಗಿದ್ದ ಅವರು, ಎಂಭತ್ತರ ದಶಕದಲ್ಲಿ ಪ್ರಾರಂಭವಾದ ಗೋಕಾಕ್ ಚಳುವಳಿಯಲ್ಲಿ ಕನ್ನಡ ಕ್ರಿಯಾ ಸಮಿತಿ ವತಿಯಿಂದ ಆರಂಭದಿಂದಲೂ ಭಾಗಿಯಾಗಿದ್ದರು. ಕನ್ನಡ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಅಂದು ಆಯ್ಕೆಯಾಗಿ ಇಂದಿನವರೆಗೂ ಮುಂದುವರಿದಿದ್ದರು.

ಸರ್ಕಾರದ ವತಿಯಿಂದ ಕನ್ನಡಕ್ಕೆ ಕುತ್ತು ಬಂದ ಬಹುತೇಕ ಸಂದರ್ಭಗಳಲ್ಲಿ ಹೋರಾಟ ಮಾಡಿದ್ದ ಅವರು, ಹಲವಾರು ಧರಣಿಗಳು, ಪ್ರತಿಭಟನೆಗಳಲ್ಲಿ ಭಾಗಿಯಾಗಿ, ಹಲವು ಬಾರಿ ಬಂಧನವಾಗಿ ಬಿಡುಗಡೆಯಾಗಿದ್ದರು.

Tags:
error: Content is protected !!