Mysore
15
broken clouds

Social Media

ಬುಧವಾರ, 24 ಡಿಸೆಂಬರ್ 2025
Light
Dark

ಪತ್ರಕರ್ತರ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ:‌ ಅಂದೋಲನ ಚಾಂಪಿಯನ್‌

ಮೈಸೂರು: ಪತ್ರಕರ್ತರ ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿಯ ರೋಚಕ ಫೈನಲ್‌ನಲ್ಲಿ ‘ಆಂದೋಲನ’ ದಿನ ಪತ್ರಿಕೆ ತಂಡ ಭರ್ಜರಿ ಜಯ ಸಾಧಿಸಿತು.

ನಗರದ ಮೈಸೂರು ವಿಶ್ವವಿದ್ಯಾನಿಲಯದ ಮಿನಿ ಹಾಕಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬೌಂಡರಿ-ಸಿಕ್ಸರ್‌ಗಳ ಹೊಳೆ ಹರಿಯಿತು. 88 ರನ್‌ಗಳ ಬೃಹತ್ ಮೊತ್ತವನ್ನು ವಿಕೆಟ್ ನಷ್ಟವಿಲ್ಲದೆ 1 ಓವರ್ ಬಾಕಿ ಇರುವಂತೆ ಚಚ್ಚಿದ ‘ಆಂದೋಲನ’ ಗೆಲುವಿನ ನಗೆ ಬೀರಿತು.

ಟಾಸ್ ಗೆದ್ದು ಫಿಲ್ಡಿಂಗ್ ಆಯ್ದುಕೊಂಡ ಆಂದೋಲನ ತಂಡದ ಲೆಕ್ಕಚಾರವನ್ನು ವಿಜಯವಾಣಿ ತಂಡದ ರೋಹಿತ್, ಆದರ್ಶ, ಅಂಟೋನಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ಬದಲು ಮಾಡಿತು. ಬೌಂಡರಿ ಸಿಕ್ಸರ್‌ಗಳನ್ನು ಸಿಡಿಸಿ ಅಬ್ಬರಿಸಿದ ಪರಿಣಾಮ ನಿಗದಿತ 6 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 88 ರನ್ ಗಳಿಸಿತು.

ಬೃಹತ್ ಮೊತ್ತ ಗುರಿ ಬೆನ್ನತ್ತಿದ ‘ಆಂದೋಲನ’ ತಂಡದ ನಾಯಕ ಚಿರಂಜೀವಿ ಮತ್ತು ಸುರೇಶ್.ಎಂ ಜೋಡಿಯೂ ವಿಜಯವಾಣಿ ತಂಡದ ಬೌಲರ್‌ಗಳನ್ನು ದಂಡಿಸಿದರು. ಬೌಂಡರಿಗಳ ಸುರಿಮಳೆಗೈದರು.

ಪಂದ್ಯದಲ್ಲಿ 5 ಸಿಕ್ಸರ್ 2 ಆಕರ್ಷಕ ಬೌಂಡರಿ ಸಹಿತ 43 ರನ್‌ಗಳಿಸಿದ ಸುರೇಶ್.ಎಂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೇ ಪೈನಲ್‌ನಲ್ಲಿ 41 ರನ್‌ಗಳ ಕೊಡುಗೆ ನೀಡಿ ಟೂರ್ನಿಯುದ್ದಕ್ಕೂ ಬೌಲಿಂಗ್-ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಚಿರಂಜೀವಿ ಸರಣಿ ಶ್ರೇಷ್ಠ ತಮ್ಮದಾಗಿಸಿಕೊಂಡರು. ಆಂದೋಲನ, ಪ್ರತಿನಿಧಿ, ವಿಜಯವಾಣಿ, ಪ್ರಜಾವಾಣಿ, ವಿಜಯ ಕರ್ನಾಟಕ, ಫ್ಲೇಯಿಂಗ್ ೧೧ ತಂಡಗಳು ಭಾಗವಹಿಸಿದ್ದವು.

ಹಿರಿಯ ಪತ್ರಕರ್ತ ಅಂಶಿಪ್ರಸನ್ನ ಕುಮಾರ್ ಅವರು ಬಹುಮಾನ ವಿತರಿಸಿ ಮಾತನಾಡಿ, ಆರೋಗ್ಯದ ಬಗ್ಗೆ ಪತ್ರಕರ್ತರು ಕಾಳಜಿ ವಹಿಸಬೇಕು. ಸದಾ ಬ್ರೇಕಿಂಗ್ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ಪತ್ರಕರ್ತರು ಮಾನಸಿಕವಾಗಿ ದೈಹಿಕವಾಗಿ ಅತ್ಯಂತ ಚಟುವಟಿಕೆಯಿಂದ ಇರಲು ಕ್ರೀಡೆ ಸಹಕಾರಿ ಎಂದು ಹೇಳಿದರು.

ಪತ್ರಕರ್ತರು ವೃತ್ತಿ ತ್ಯಜಿಸುವ ತನಕವೂ ಕೆಲಸದ ಒತ್ತಡ ಇರುತ್ತದೆ. ದೀರ್ಘ ಕಾಲ ಕರ್ತವ್ಯ ನಿರ್ವಹಿಸಬೇಕಾದರೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಬೇಕು. ಎಲ್ಲ ಪತ್ರಕರ್ತರು ಒಂದೆಡೆ ಸೇರಿ ಕ್ರೀಡಾಸ್ಪೂರ್ತಿ ಮೆರದಿರುವುದು ಪ್ರಶಂಸನೀಯ. ತಿಂಗಳಿಗೊಮ್ಮೆ ಈ ರೀತಿಯ ಕ್ರೀಡಾಕೂಟ ಸಂಘಟಿಸುಂತೆ ಸಲಹೆ ನೀಡಿದರು.

ಪ್ರಸ್ತುತ ದಿನಮಾನಗಳಲ್ಲಿ ಪತ್ರಕರ್ತರು ತಮ್ಮ ಆರೋಗ್ಯದ ರಕ್ಷಣೆಗೆ ಆದ್ಯತೆ ಕೊಡಬೇಕು. ಕುಟುಂಬದ ಸದಸ್ಯರಿಗೂ ಸಮಯ ಕೊಡಬೇಕು ಎಂದು ತಿಳಿಸಿದರು.

Tags:
error: Content is protected !!