Mysore
17
few clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಗೃಹ ಸಚಿವರಿಗೆ ಪೊಲಿಟಿಕಲ್‌ ವೈರಾಗ್ಯ ಬಂದ ಆಗಿದೆ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಮೈಸೂರು: ಗೃಹ ಸಚಿವ ಜಿ.ಪರಮೇಶ್ವರ್‌ ರಾಜೀನಾಮೆ ನೀಡುವ ಹೇಳಿಕೆ ಕುರಿತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಗೃಹ ಸಚಿವರಿಗೆ ಪೊಲಿಟಿಕಲ್‌ ವೈರಾಗ್ಯ ಬಂದ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಉದಯಗಿರಿ ಪೊಲೀಸ್‌ ಠಾಣೆಯ ಮೇಲೆ ಕಲ್ಲು ತೂರಾಟ ಕುರಿತು ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹದೇವಪ್ಪ ಹೇಳುತ್ತಾರೆ ಸಿಎಂ ರೆಕಾರ್ಡ್‌ ಮಾಡಬೇಕು ಅಂತಾರೆ. ಮಹದೇವಪ್ಪ ಅವರೇ, ಎಷ್ಟು ವರ್ಷ ಆಡಳಿತ ನಡೆಸಿದ್ದೀರಿ ಅನ್ನೋದಲ್ಲ. ಈ ನಾಡಿನ ಜನರ ಎಷ್ಟು ಸಮಸ್ಯೆ ಬಗೆಹರಿಸಿದ್ದೀರಿ ಅನ್ನೋದು ಮುಖ್ಯ. ನಮಗೆ 20 ತಿಂಗಳ, 14 ತಿಂಗಳ ಆಡಳಿತ ತೃಪ್ತಿಯಿದೆ. ಗ್ಯಾರಂಟಿ ಯೋಜನೆ ಯಾರಪ್ಪನ ದುಡ್ಡು. ಮೆಟ್ರೋ ದರ ಏರಿಸಿ ಹಣ ಕೊಡೋಕೆ ನೀವೇ ಆಗಬೇಕಾ? ಈ ರೀತಿ ದರ ಏರಿಸಿದರೆ ನಾನು 10 ಸಾವಿರ ರೂ ಕೊಡುತ್ತೇನೆ ಎಂದು ಟಾಂಗ್‌ ಕೊಟ್ಟರು.

ಇನ್ನು ಉದಯಗಿರಿ ಪೊಲೀಸ್‌ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ ಸಂಬಂಧ ಮೂಟೆಗಟ್ಟಲೇ ಕಲ್ಲು ತೆಗೆದುಕೊಂಡು ಬಂದು ಹೊಡೆದವರನ್ನು ರಕ್ಷಣೆ ಮಾಡಬೇಕಾ ಎಂದು ಪ್ರಶ್ನೆ ಮಾಡಿದರು.

ಇನ್ನು ಯಾರನ್ನೋ ಓಲೈಸಲು ಸರ್ಕಾರ ಇಲ್ಲ. ಕಾನೂನು ಬಾಹಿರ ಚಟುವಟಿಕೆ ನಡೆಸುವವನು ಯಾರೇ ಆಗಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇದು ರಾಜ್ಯ ಸರ್ಕಾರದ ಕರ್ತವ್ಯ ಎಂದರು.

 

Tags:
error: Content is protected !!