Mysore
21
mist

Social Media

ಗುರುವಾರ, 29 ಜನವರಿ 2026
Light
Dark

ಮನಮೋಹನ್‌ ಸಿಂಗ್‌ ನಿಧನ, ಏಳು ದಿನ ಶೋಕಾಚರಣೆ: ಡಿ.31 ರಂದು ಪೊಲೀಸ್‌ ಬ್ಯಾಂಡ್‌, ಹಸಿರು ಪಟಾಕಿ ಪ್ರದರ್ಶನ ರದ್ದು

ಮೈಸೂರು: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿಧನರಾದ ಹಿನ್ನಲೆಯಲ್ಲಿ ಡಿಸೆಂಬರ್‌.31 ರಂದು ಆಯೋಜಿಸಲಾಗಿದ್ದ ಪೊಲೀಸ್‌ ಬ್ಯಾಂಡ್‌ ಮತ್ತು ಪಟಾಕಿ ಪ್ರದರ್ಶನವನ್ನು ರದ್ದು ಮಾಡಲಾಗಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ರಾಜ್ಯದಲ್ಲಿ ಏಳು ದಿನಗಳ ಕಾಲ ಶೋಕಾಚರಣೆ ಜಾರಿಯಲ್ಲಿರುವ ಕಾರಣ ‌ಮೈಸೂರು ಅರಮನೆಯಲ್ಲಿ ಡಿಸೆಂಬರ್‌.31 ರಂದು ರಾತ್ರಿ 11 ರೀಮದ 12 ಗಂಟೆಯವರೆಗೆ ಪೊಲೀಸ್‌ ಬ್ಯಾಂಡ್‌ ಆಯೋಜಿಸಲಾಗಿರುವುದನ್ನು ರದ್ದುಗೊಳಿಸಲಾಗಿದೆ. ಅಲ್ಲದೇ 2025ರ ಜನವರಿ ಮುಂಜಾನೆ 12 ರಿಂದ 12.15 ಗಂಟೆಯವರೆಗೂ ಆಯೋಜಿಸಲಾಗಿದ್ದ ಹಸಿರು ಪಟಾಕಿ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ ಎಂದು ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ ಸುಬ್ರಮಣ್ಯ ಅವರು ತಿಳಿಸಿದ್ದಾರೆ.

ಪ್ರತಿವರ್ಷ ಅರಮನೆ ಆವರಣದಲ್ಲಿ ಅರಮನೆ ಮಂಡಳಿ ವತಿಯಿಂದ ಡಿಸೆಂಬರ್‌ ತಿಂಗಳ ಕೊನೆಯ ದಿನ ಹಾಗೂ ಜನವರಿ ಮೊದಲ ದಿನದಂದು ಸಾರ್ವಜನಿಕರಿಗಾಗಿ ಮಧ್ಯರಾತ್ರಿ ವೇಳೆ ಪೊಲೀಸ್‌ ಬ್ಯಾಂಡ್‌ ಹಾಗೂ ಹಸಿರು ಪಟಾಕಿ ಪ್ರದರ್ಶನವನ್ನು ಆಯೋಜಿಸಲಾಗುತ್ತಿತ್ತು. ಆದರೆ ಈ ಬಾರಿ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್‌ ಅವರು ನಿಧನರಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಏಳು ದಿನಗಳ ಕಾಲ ಶೋಕಾಚರಣೆ ಜಾರಿಯಲ್ಲಿರುತ್ತದೆ ಎಂದು ಆದೇಶ ಹೊರಡಿಸಲಾಗಿದೆ. ಹೀಗಾಗಿ ಈ ವರ್ಷ ಆ ಎರಡೂ ದಿನಗಳ ಕಾಲ ಪೊಲೀಸ್‌ ಬ್ಯಾಂಡ್‌ ಮತ್ತು ಹಸಿರು ಪಟಾಕಿ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದ್ದಾರೆ.

 

Tags:
error: Content is protected !!