ಮೈಸೂರು: ಪ್ರಿನ್ಸಸ್ ರಸ್ತೆ ಎಂದು ಈಗಾಗಲೇ ಆ ರಸ್ತೆಗೆ ಹೆಸರಿಟ್ಟಿರುವಾಗ ಮತ್ತೆ ಯಾಕೆ ಸಿದ್ದರಾಮಯ್ಯ ಅವರ ಹೆಸರು ಇಡಬೇಕು ಎಂದು ಶಾಸಕ ಟಿ.ಎಸ್.ಶ್ರೀವತ್ಸ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ರಸ್ತೆಗೆ ಹೆಸರಿರುವಾಗ ಇನ್ನೊಂದು ಹೆಸರೇಕೆ ಎಂದು ಪ್ರಶ್ನೆ ಮಾಡಿದರು. ಸಿಎಂ ಸಿದ್ದರಾಮಯ್ಯ ಅವರ ಹೆಸರನ್ನು ತಂದು ಯಾಕೆ ಚರ್ಚೆ ಹುಟ್ಟು ಹಾಕುತ್ತಿದ್ದಾರೋ ಗೊತ್ತಾಗುತ್ತಿಲ್ಲ. ನಮ್ಮ ರಾಜ್ಯದಲ್ಲಿ ಬ್ರಿಟಿಷರಿದ್ದಾಗ ಇಟ್ಟಿದ್ದ ಹೆಸರುಗಳನ್ನೇ ಇನ್ನೂ ಬದಲಾಯಿಸಿಲ್ಲ. ಪ್ರಿನ್ಸಸ್ ರಸ್ತೆ ಎಂದು ಈಗಾಗಲೇ ಆ ರಸ್ತೆಗೆ ಹೆಸರಿಟ್ಟಿರುವಾಗ ಮತ್ತೆ ಯಾಕೆ ಸಿದ್ದರಾಮಯ್ಯ ಅವರ ಹೆಸರು ಇಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಹೆಸರು ಖಾಲಿ ಇರುವ ರಸ್ತೆಗಳಿಗೆ ಹೆಸರು ಇಡಲಿ. ಇದರಲ್ಲಿ ನಮ್ಮ ಆಕ್ಷೇಪವೇನು ಇಲ್ಲ. ಸುಖಾ ಸುಮ್ಮನೆ ರಸ್ತೆ ವಿಚಾರದಲ್ಲಿ ರಾಜಕೀಯ ಜಟಾಪಟಿ ಮಾಡುವುದು ಸರಿಯಲ್ಲ. ಪ್ರಿಸ್ಕೂಲ್ ರಸ್ತೆ ನಾಮಕರಣದ ಬಗ್ಗೆ ಕಳೆದ 2015ರಲ್ಲಿ ಕನ್ಜೂಮರ್ ಕೋರಮ್ ಮೂಲಕ ನಿರ್ಣಯ ಆಗಿದೆ. ಹಾಗಾಗಿ ಹೆಸರು ಬದಲಾಯಿಸುವ ಅವಶ್ಯಕತೆ ಇಲ್ಲ ಎಂದು ಸಲಹೆ ನೀಡಿದರು.