ಮೈಸೂರು: ದೇಶದಲ್ಲಿ ವಿಚಾರದಲ್ಲಿ ಯಾರೂ ಕೂಡ ಆಕ್ಷೇಪಾರ್ಹ ಹೇಳಿಕೆ ನೀಡಬಾರದು ಎಂದು ಎನ್.ಆರ್.ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.
ಕದನ ವಿರಾಮ ಘೋಷಣೆಗೆ ದೇಶದಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದ ವಿಚಾರದಲ್ಲಿ ಟೀಕೆ ಮಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಕದನ ವಿರಾಮ ಘೋಷಣೆ ಕುರಿತು ಉಭಯ ರಾಷ್ಟ್ರಗಳ ನಡುವೆ ಅಮೇರಿಕಾ ಮಧ್ಯಸ್ಥಿಕೆ ವಹಿಸಿ ಮಾತುಕತೆ ಮೂಲಕ ಬಗೆಹರಿಸುವ ಪ್ರಯತ್ನ ಮಾಡಿದೆ. ಅದು ಸರಿಯಲ್ಲ ಇದು ಸರಿಯಲ್ಲ ಎನ್ನುವ ಕೀಳು ಮಟ್ಟದ ರಾಜಕೀಯ ಮಾಡೋದು ಸರಿಯಲ್ಲ. ಕೇಂದ್ರ ಸರ್ಕಾರ ಏನು ನಿರ್ಧಾರ ತಗೆದುಕೊಂಡಿದೆ ಅದಕ್ಕೆ ನಾವು ಬದ್ಧರಾಗಿ ವರ್ತಿಸಬೇಕು. ದೇಶದ ವಿಚಾರ ಬಂದಾಗ ಆಕ್ಷೇಪಾರ್ಹ ಹೇಳಿಕೆಗಳನ್ನು ಕೂಡ ಕೊಡಬಾರದು ಎಂದರು.





