ಮೈಸೂರು: ಉದಯಗಿರಿ ಠಾಣೆಯ ಗಲಭೆಯಂತೆ ಎನ್‌ಆರ್ ಠಾಣೆಗೂ ಕಲ್ಲು ಹೊಡೆದು ಗಲಾಟೆ ಎಬ್ಬಿಸುತ್ತೇವೆ ಎಂದು ಅವಾಜ್ ಹಾಕಿ ಪೋಲಿಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ 12 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ನಗರದ ಮಾದೇಶ್, ಗಿರೀಶ್, ರವಿಕುಮಾರ್, ಕಿರಣ್, ಆ.ಬಾತು, ರಾಘವೇಂಧ್ರ, ದಾದಾ, ಕೀರ್ತಿ, ನಾಗೇಂದ್ರ ಸೇರಿ 12 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಯುಗಾದಿ ಹಬ್ಬದಂದು ಗಾಂಧಿನಗರದಲ್ಲಿ ದುರ್ಗಾದೇವಿ ಮೆರವಣಿಗೆಯ ವೇಳೆ ಎರಡು ಗುಂಪಿನ ಯುವಕರ ನಡುವೆ ಪರಸ್ಪರ ಗಲಾಟೆಯಾಗಿದೆ. ಈ ವೇಳೆ ಗಲಾಟೆ ಬಿಡಿಸಲು ಮುಂದಾದ ಪೊಲೀಸ್ ಸಿಬ್ಬಂದಿ ವಿರುದ್ಧ ತಿರುಗಿಬಿದ್ದ ಗುಂಪು ಅವಾಚ್ಯ ಶಬ್ದಗಳಿಂದ ನಿಂದಿಸಿ ಪೊಲೀಸರ ಮೇಲೆಯೆ ಹಲ್ಲೆ ನಡೆಸಿದೆ.
ಅಲ್ಲದೇ, ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ಎಸೆದಂತೆ ಎನ್.ಆರ್ ಠಾಣೆ ಮೇಲೂ ಕಲ್ಲು ಹೊಡೆಯುತ್ತೇವೆ ಎಂದು ಅವಾಜ್ ಹಾಕಿದ್ದಾರೆ ಎನ್ನಲಾಗಿದೆ.





