Mysore
15
clear sky

Social Media

ಶುಕ್ರವಾರ, 23 ಜನವರಿ 2026
Light
Dark

ಮೈಸೂರು ಪ್ರಧಾನ ಅಂಚೆ ಕಚೇರಿಯಲ್ಲಿ ಜೂನ್ 2 ಮತ್ತು 3ರಂದು ವಹಿವಾಟು ಇರಲ್ಲ

post office

ಮೈಸೂರು: ಐಟಿ 2.0 ಅಡಿಯಲ್ಲಿ ಹೊಸ ತಂತ್ರಾಂಶವನ್ನು ಅಳವಡಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಪ್ರಧಾನ ಅಂಚೆ ಕಚೇರಿ ಮತ್ತು ಅದರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪ ಅಂಚೆ ಕಚೇರಿಗಳಲ್ಲಿ ಜೂನ್ 2 ಮತ್ತು 3 ರಂದು ಯಾವುದೇ ರೀತಿಯ ವಹಿವಾಟು ಇರುವುದಿಲ್ಲ ಎಂದು ಮೈಸೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಜಿ.ಹರೀಶ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು ಬನ್ನಿಮಂಟಪ, ಚಾಮುಂಡಿ ಎಕ್ಸ್ ಟೆನ್ಷನ್, ಜಿ.ಎಸ್ ಆಶ್ರಮ, ಹೆಬ್ಬಾಳ್ ಲೇ ಔಟ್, ಜಯಲಕ್ಷ್ಮಿಪುರಂ, ಕೃಷ್ಣಮೂರ್ತಿಪುರಂ, ಮಾನಸಗಂಗೋತ್ರಿ, ಮಂಡಿ ಮೊಹಲ್ಲಾ, ಮೇಟಗಳ್ಳಿ, ಮೈಸೂರು ಫೋರ್ಟ್, ಮೈಸೂರು ಯುನಿವರ್ಸಿಟಿ, ನರಸಿಂಹರಾಜ ಮೊಹಲ್ಲಾ, ನೋಟ್ ಮುದ್ರಣ ನಗರ, ಪಿಟಿಸಿ ಕ್ಯಾಂಪಸ್, ಶಕ್ತಿ ನಗರ, ಶಿವರಾತ್ರೀಶ್ವನಗರ, ಸಿದ್ದಾರ್ಥನಗರ, ವಿಜಯನಗರ ಎರಡು ಮತ್ತು ಮೂರನೇ ಹಂತ, ಯಾದವಗಿರಿ, ಬಿಎನ್‌ಪಿಎಲ್ ಮತ್ತು ಬಿಪಿಸಿ ಅಂಚೆ ಕಚೇರಿಗಳು ಮೇಲ್ಕಂಡ ಎರಡು ದಿನಗಳ ಕಾಲ ವಹಿವಾಟು ನಡೆಸುವುದಿಲ್ಲ ಎಂದು ಹೇಳಿದ್ದಾರೆ.

ಸರಸ್ವತಿಪುರಂ ಪ್ರಧಾನ ಅಂಚೆ ಕಚೇರಿ ಮತ್ತು ಅದರ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಗ್ರಾಹಕರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

Tags:
error: Content is protected !!