ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎನ್‌ಸಿಬಿ ದಾಳಿ ವೇಳೆ ಯಾವುದೇ ಮಾದಕ ವಸ್ತು ಪತ್ತೆಯಾಗಿಲ್ಲ ಎಂದು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಸೀಮಾ ಲಾಟ್ಕರ್ ಅವರು, ಇದೊಂದು ಫಾಲೋ ಆಫ್ ಕೇಸ್. ಗುಜರಾತ್‌ನಲ್ಲಿ ಓರ್ವ ಆರೋಪಿ ಸಿಕ್ಕಿದ್ದಾನೆ. ಆತನ ಸಂಬಂಧಿ ಈ ಗಣಪತ್ ಲಾಲ್. ಈತ ಇಲ್ಲಿ ಫಿನಾಯಿಲ್ ಫ್ಯಾಕ್ಟರಿ ನಡೆಸುತ್ತಿದ್ದಾರೆ. ಅನುಮಾನ ಬಂದ ಹಿನ್ನೆಲೆಯಲ್ಲಿ ಇಲ್ಲಿಯೂ ಪರಿಶೀಲನೆ ನಡೆಸಿದ್ದಾರೆ. ಆದರೆ ಇಲ್ಲಿ ಯಾವುದೇ ಮಾದಕ ವಸ್ತುಗಳು ಪತ್ತೆ ಆಗಿಲ್ಲ. ನಮ್ಮ ಪೊಲೀಸರು NCB ಅಧಿಕಾರಿಗಳಿಗೆ ಸಹಕಾರ ಕೊಟ್ಟಿದ್ದೇವೆ ಎಂದು ಮಾಹಿತಿ ನೀಡಿದರು.





