Mysore
20
clear sky

Social Media

ಮಂಗಳವಾರ, 07 ಏಪ್ರಿಲ 2026
Light
Dark

ಸದ್ಯಕ್ಕೆ ಮೈಸೂರು ಜಿಲ್ಲೆಯಲ್ಲಿ ಹಕ್ಕಿಜ್ವರದ ಸೋಂಕು ಕಾಣಿಸಿಕೊಂಡಿಲ್ಲ: ಡಾ.ನಾಗರಾಜು ಸ್ಪಷ್ಟನೆ

ಮೈಸೂರು: ರಾಜ್ಯದಲ್ಲಿ ಹಲವೆಡೆ ಹಕ್ಕಿ ಜ್ವರ ಉಲ್ಬಣಗೊಂಡಿದ್ದು, ಮೈಸೂರು ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಶು ಸಂಗೋಪನೆ ಉಪ ನಿರ್ದೇಶಕ ಡಾ.ನಾಗರಾಜು ಮಾಹಿತಿ ನೀಡಿದ್ದಾರೆ.

ಈ ಕುರಿತು ಮೈಸೂರಿನಲ್ಲಿಂದು ಮಾಹಿತಿ ನೀಡಿದ ಅವರು, ಹಕ್ಕಿಜ್ವರ ಹರಡುತ್ತಿರುವ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ. ನಮ್ಮ ಆಯುಕ್ತಾಲಯದಿಂದಲೂ ನಿರ್ದೇಶನ ಬಂದಿದೆ. ರಾಜ್ಯದ ಬಳ್ಳಾರಿ ಹಾಗೂ ಚಿಕ್ಕಬಳ್ಳಾಪುರ ಭಾಗದಲ್ಲಿ ಹೆಚ್ಚು ಹಕ್ಕಿ ಜ್ವರ ಕಾಣಸಿಕೊಂಡಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಅಂತಹ ಯಾವುದೇ ಪ್ರಕರಣಗಳು ಬೆಳಕಿಗೆ ಬಂದಿಲ್ಲ. ಆದರೂ ಜಿಲ್ಲೆಯಲ್ಲಿ ಈಗಾಗಲೇ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ವಿಶೇಷ ತಂಡ ರಚಿಸಿ ಜಿಲ್ಲೆಯಲ್ಲಿರುವ ಕೋಳಿ ಫಾರಂಗಳಲ್ಲಿ ಅಸಹಜವಾಗಿ ಕೋಳಿಗಳ ಸಾವಾದರೆ ಅಂತಹವುಗಳ ಮೇಲೆ ತೀವ್ರ ನಿಗಾ ವಹಿಸಲಾಗುತ್ತದೆ. ವಲಸೆ ಬಂದ ಹಕ್ಕಿಗಳ ಇಕ್ಕೆ, ಗ್ರಾಮೀಣ ಭಾಗದ ನಾಟಿ ಕೋಳಿಗಳ ಇಕ್ಕೆಗಳನ್ನು ಸಂಗ್ರಹ ಮಾಡಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸದ್ಯಕ್ಕೆ ನಮ್ಮ ಜಿಲ್ಲೆಯಲ್ಲಿ ಹಕ್ಕಿ ಜ್ವರದ ಸೋಂಕು ಕಾಣಿಸಿಕೊಂಡಿಲ್ಲ. ಗಡಿ ಭಾಗದಲ್ಲೂ ವಿಶೇಷ ತಂಡಗಳನ್ನು ಕಳುಹಿಸಿ ತಪಾಸಣೆ ಮಾಡುತ್ತಿದ್ದೇವೆ. ಪಶುವೈದ್ಯರ ಸಮ್ಮುಖದಲ್ಲಿ ವಿಶೇಷ ತಂಡ ರಚಿಸಿ ಹಳ್ಳಿ-ಹಳ್ಳಿಗಳ ಕಡೆ ಭೇಟಿ ಕೊಟ್ಟು ತೀವ್ರ ನಿಗಾ ವಹಿಸಿ ಹಕ್ಕಿ ಜ್ವರದ ಸೋಂಕು ಬಾರದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.

 

Tags:
error: Content is protected !!