Mysore
25
scattered clouds

Social Media

ಬುಧವಾರ, 15 ಜನವರಿ 2025
Light
Dark

ಮೈಸೂರಿನ ಚಿತ್ರಮಂದಿರವೊಂದರಲ್ಲಿ ರಾಷ್ಟ್ರಗೀತೆಗೆ ಅವಮಾನ: ಪ್ರತಾಪ್‌ ಸಿಂಹ ಆಕ್ರೋಶ

ಮೈಸೂರು: ನಗರದ ಚಲನಚಿತ್ರ ಮಂದಿರವೊಂದರಲಿ ಕೆಲ ಕಿಡಿಗೇಡಿಗಳು ರಾಷ್ಟ್ರಗೀತೆಗೆ ಅವಮಾನ ಮಾಡಿರುವ ಪ್ರಸಂಗಕ್ಕೆ ಮಾಜಿ ಸಂಸದ ಪ್ರತಾಪ್‌ ಸಿಂಹ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸೋಮವಾರ(ಜು.22) ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಯಾರಿಗೆ ಪವಿತ್ರ ಭೂಮಿ ಮತ್ತು ಜನ್ಮಭೂಮಿ ಒಂದೇ ಅಂತ ಭಾವನೆ ಇರುವುದಿಲ್ಲವೇ, ಮದರ್‌ ಲ್ಯಾಂಡ್‌ ಹಾಗೂ ಹೋಲಿ ಲ್ಯಾಂಡ್‌ ಕೂಡ ಇದೇನೇ ಎಂಬ ಭಾವನೆ ಇರುವುದಿಲ್ಲವೋ ಅಂಥವರಿಂದ ಈ ಹೋಲಿಕೆ ಆಗುತ್ತದೆ. ಹೋಲಿಲ್ಯಾಂಡ್‌ ಅರಬ್‌ನಲ್ಲಿ ಇದೆ ಎಂದು ಯಾರೋ ಭಾವಿಸುತ್ತಾರೋ ಅವರಿಂದ ಇಂತಹ ಸಮಸ್ಯೆಯಾಗುತ್ತದೆ ಎಂದು ಖಾರವಾಗಿ ಹೇಳಿದರು.

ಈ ಘಟನೆ ನಡೆದಾಗ ಚಿತ್ರಮಂದಿರದಲ್ಲಿದ್ದವರು ಅಂತವರಿಗೆ ಕಿವಿ ಹಿಂಡುವ ಕೆಲಸ ಮಾಡಬೇಕಿತ್ತು. ಆದರೆ ಯಾರು ಕೂಡ ಆ ಕೆಲಸ ಮಾಡಿಲ್ಲ. ಇನ್ನು ಮುಂದಾದರೂ ಈ ರೀತಿ ಆಗದಂತೆ ನೋಡಿಕೊಳ್ಳಬೇಕಿದೆ ಎಂದರು.

ಏನಿದು ಘಟನೆ?

ನಗರದ ಗೋಕುಲಂ ರಸ್ತೆಯಲ್ಲಿರುವ ಡಿ.ಆರ್‌.ಸಿ ಚಿತ್ರಮಂದಿರದಲ್ಲಿ, ನಿನ್ನೆ ರಾತ್ರಿ ಸಿನಿಮಾ ವೀಕ್ಷಣೆಯ ವೇಳೆ ಕಿಡಿಗೇಡಿಗಳು ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆಂದು ಗಲಾಟೆಯಾಗಿದೆ. ಕಿಡಿಗೇಡಿಗಳು ಪಾಕಿಸ್ತಾನ ಪರ ಘೋಷಣೆ ಕೂಗಿದ್ದರು ಹಾಗಾಗಿ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ.

ಹೀಗಾಗಿ ಜಯಲಕ್ಷ್ಮೀಪುರಂ ಇನ್ಸ್‌ ಪೆಕ್ಟ್ರ್‌ ಕುಮಾರ್‌ ನೇತೃತ್ವದಲ್ಲಿ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದ್ದು, ಇಂದು ಪೊಲೀಸರು ಚಿತ್ರಮಂದಿರಕ್ಕೆ ಭೇಟಿ ನೀಡಿ ಸಿಸಿಟಿವಿ ವಿಡಿಯೋ ಪರಿಶೀಲನೆ ಮಾಡಿದರು. ಸಿಸಿಟಿವಿ ದೃಶ್ಯಾವಳಿಗಳನ್ನ ವಶಕ್ಕೆ ಪಡೆದ ಪೊಲೀಸರು, ಬಳಿಕ ಚಿತ್ರಮಂದಿರ ಮಾಲೀಕರಿಂದ ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಿದರು.

Tags: