ಮೈಸೂರು: ಮೈಸೂರಿನಲ್ಲಿ ಸೋಮವಾರ(ಜು.8) ಮತ್ತು ಮಂಗಳವಾರ(ಜು.9) ಕಬಿನಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಮೈಸೂರು ನಗರಕ್ಕೆ ಕುಡಿಯವ ನೀರು ಸರಬರಾಜು ಮಾಡುವ ಕಬಿನಿ ನೀರು ಸರಬರಾಜು ಮೂಲ ಸ್ಥಾವರದಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದ ರಿಂದ ಕೆಲವಡೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಈ ಪ್ರದೇಶದಲ್ಲಿ ನೀರು ಇರಲ್ಲ
ವಾರ್ಡ್ ನಂ.42ರಿಂದ 51ರ ವ್ಯಾಪ್ತಿಯ ಕೆ.ಜಿ.ಕೊಪ್ಪಲು, ಜನತಾನಗರ, ಶಾರದಾದೇವಿನಗರ, ದಟ್ಟಗಳ್ಳಿ 3ನೇ ಹಂತ, ಕುವೆಂಪುನಗರ, ಜಯನಗರ, ಲಕ್ಷ್ಮೀಪುರಂ, ಸುಣ್ಣದಕೇರಿ, ಅಗ್ರಹಾರ ಹಾಗೂ ವಾರ್ಡ್ ನಂ.54ರಿಂದ 65ರ ವ್ಯಾಪ್ತಿಯ ಗುಂಡು ರಾವ್‌ನಗರ, ಚಾಮುಂಡಿಪುರಂ, ಕೃಷ್ಣಮೂರ್ತಿ ಪುರಂ, ಕುವೆಂಪುನಗರ, ಸಿಐಟಿಬಿ, ರಾಮಕೃಷ್ಣನಗರ, ಕುವೆಂಪುನಗರ ಎಂ-ಬ್ಲಾಕ್, ಅಶೋಕಪುರಂ, ವಿದ್ಯಾರಣ್ಯಪುರಂ ಮತ್ತು ಸುತ್ತಮುತ್ತ, ವಿಶ್ವೇಶ್ವರನಗರ, ಜೆ.ಪಿ.ನಗರ, ಅರವಿಂದನಗರ, ಶ್ರೀರಾಂಪುರ ಹಾಗೂ ಇತ್ಯಾದಿ ಪ್ರದೇಶಗಳಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.