Mysore
27
broken clouds

Social Media

ಬುಧವಾರ, 24 ಡಿಸೆಂಬರ್ 2025
Light
Dark

Mysuru: ನೆನೆಗುದಿಗೆ ಬಿದ್ದಿದ್ದ ಯುದ್ಧ ಸ್ಮಾರಕದ ಕಾಮಗಾರಿ ಮತ್ತೆ ಚುರುಕು

war statue construction

ಮೈಸೂರು: ಇಲ್ಲಿನ ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ನೆನೆಗುದಿಗೆ ಬಿದ್ದಿದ್ದ ಯುದ್ಧ ಸ್ಮಾರಕ ಮತ್ತೆ ನಿರ್ಮಾಣವಾಗುತ್ತಿದ್ದು, ಪಾಲಿಕೆ ಹಾಗೂ ಮುಡಾದಿಂದಲೂ ಅನುದಾನ ಕೊಡಲು ಒಪ್ಪಿಗೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕಳೆದ 2018ರಲ್ಲಿ ಸಿದ್ದರಾಮಯ್ಯ ಮೊದಲ ಬಾರಿಗೆ ಸಿಎಂ ಆಗಿದ್ದಾಗ ಈ ಯುದ್ಧ ಸ್ಮಾರಕದ ಕಾಮಗಾರಿಗೆ 1.44 ಕೋಟಿ ರೂ ಬಿಡುಗಡೆ ಮಾಡಿದ್ದರು. ಆದರೆ ಅಂದಿನಿಂದಲೂ ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಸಾಗುತ್ತಿತ್ತು.

ಇದನ್ನೂ ಓದಿ:- ಏ.23 ರಂದು ಕೋಮುವಾದ ಧಿಕ್ಕರಿಸಿ; ಸಂವಿಧಾನ ರಕ್ಷಿಸಿ ಜನಾಕ್ರಾಂತಿ ಸಮಾವೇಶ

ಈ ಹಿನ್ನೆಲೆಯಲ್ಲಿ ಯುದ್ಧ ಸ್ಮಾರಕದ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸುವಂತೆ ಜನತೆಯಿಂದ ಒತ್ತಾಯ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಈಗ ಕಾಮಗಾರಿ ಚುರುಕು ಪಡೆದುಕೊಂಡಿದ್ದು, ಪಾಲಿಕೆ ಹಾಗೂ ಮುಡಾದಿಂದಲೂ ಅನುದಾನ ಕೊಡಲು ಒಪ್ಪಿಗೆ ನೀಡಲಾಗಿದೆ.

ಇದನ್ನೂ ಓದಿ:- ಕೆ.ಆರ್‌ ನಗರ | ಮದ್ಯದಂಗಡಿ ತೆರೆಯಲು ವಿರೋಧ, ಮಹಿಳೆಯರ ಪ್ರತಿಭಟನೆ

ಅಂದಿನ ಎಡಿಸಿಯಾಗಿದ್ದ ಮಾಜಿ ಸೈನಿಕ ಆನಂದ್ ಕುಮಾರ್ ಮೇಲ್ವಿಚಾರಣೆಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಸುಮಾರು 4.27 ಗುಂಟೆ ಜಾಗದಲ್ಲಿ ಸುಸಜ್ಜಿತ ಉದ್ಯಾನವನವನ್ನು ನಿರ್ಮಾಣ ಮಾಡುವುದಕ್ಕೂ ಚಿಂತನೆ ನಡೆಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಎಡಿಸಿ ಆನಂದ್ ಕುಮಾರ್ ಅವರು, ಉದ್ಯಾನವನ ನಿರ್ಮಾಣಕ್ಕೆ ಹಣ ಮೀಸಲಿಡಲಾಗಿದೆ. ಆದಷ್ಟು ಬೇಗ ಯುದ್ಧ ಸ್ಮಾರಕ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Tags:
error: Content is protected !!