Mysore
27
clear sky

Social Media

ಶುಕ್ರವಾರ, 06 ಫೆಬ್ರವರಿ 2026
Light
Dark

ಮೈಸೂರಿನಲ್ಲಿ ಮರಗಳ ಹನನ ಪ್ರಕರಣ: ಮುಡಾ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ

mysuru tree cutting case

ಮೈಸೂರು: ರಸ್ತೆ ಅಗಲೀಕರಣದ ಹೆಸರೇಳಿ ಹೈದರ್‌ ಅಲಿ ರಸ್ತೆಯಲ್ಲಿ 40 ಮರಗಳನ್ನು ಕಡಿದಿರುವ ಪ್ರಕರಣದ ವಾಸ್ತವತೆ ಪರಿಶೀಲನೆ ನಡೆಸಲು ಜಿಲ್ಲಾಡಳಿತ ಸಮಿತಿಯೊಂದನ್ನು ರಚನೆ ಮಾಡಿದೆ.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಜಿಲ್ಲಾಧಿಕಾರಿ ಕಚೇರಿಯು, ರಾತ್ರೋರಾತ್ರಿ ಮರಗಳನ್ನು ಕಡಿದಿರುವ ಪ್ರಕರಣದ ಕುರಿತು ಮಾಧ್ಯಮ, ಪರಿಸರ ವಾದಿಗಳು ಹಾಗೂ ಸಾರ್ವಜನಿಕರಿಂದ ತೀವ್ರ ವಿರೋಧ ಹಾಗೂ ಪ್ರತಿಭಟನೆ ನಡೆಯುತ್ತಿವೆ.

ಈ ಹಿನ್ನೆಲೆಯ್ಲಲಿ ಮರಗಳನ್ನು ಕಡಿದಿರುವ ಪ್ರಕರಣದ ವಾಸ್ತವತೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮೂರು ಸದಸ್ಯರನ್ನು ಒಳಗೊಂಡ ತನಿಖಾ ಸಮಿತಿ ರಚಿಸಲಾಗಿದ್ದು, ವಾರದೊಳಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.

Tags:
error: Content is protected !!