Mysore
25
clear sky

Social Media

ಬುಧವಾರ, 28 ಜನವರಿ 2026
Light
Dark

ಡೆಂಗ್ಯೂ ಪ್ರಕರಣಗಳಲ್ಲಿ ರಾಜ್ಯದಲ್ಲೇ ೨ನೇ ಸ್ಥಾನದಲ್ಲಿದೆ ಮೈಸೂರು

ಮೈಸೂರು : ಎಷ್ಟೇ ಮುನ್ನೆಚ್ಚರಿಕಾ ಕ್ರಮಗಳನ್ನ ತೆಗೆದುಕೊಳ್ಳುತ್ತಿದ್ದರು ಕೂಡ ರಾಜ್ಯದಲ್ಲಿ ದಿನೇ ದಿನೇ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ ಹೊರತು ಕಡಿಮೆಯಾಗುತ್ತಿಲ್ಲ. ಪ್ರತಿ ಜಿಲ್ಲೆಯಲ್ಲೂ ಕೂಡ ಒಂದಲ್ಲ ಒಂದು ಪ್ರಕರಣ ಪ್ರತಿದಿನ ಕಂಡುಬರುತ್ತಿದ್ದು, ಸಾಕಷ್ಟು ತಲೆನೋವಾಗಿ ಪರಿಣಮಿಸುವುದರ ಜೊತೆಗೆ ಆತಂಕ ಕೂಡ ಉಂಟುಮಾಡುತ್ತಿದೆ. ಕೇವಲ ಪ್ರಕರಣಗಳ ಸಂಖ್ಯೆ ಮಾತ್ರವಲ್ಲ ಒಬ್ಬರಲ್ಲ ಒಬ್ಬರು ಈ ಡೆಂಗ್ಯೂ ಮಾರಿಗೆ ಬಲಿಯಾಗುತ್ತಿದ್ದಾರೆ.

ಇನ್ನು ಸಾಂಸ್ಕೃತಿಕ ನಗರ ಮೈಸೂರು ಡೆಂಗ್ಯೂ ಪ್ರಕರಣಗಳಲ್ಲಿ ರಾಜ್ಯದಲ್ಲೇ ೨ನೇ ಸ್ಥಾನದಲ್ಲಿದೆ. ಬೆಂಗಳೂರು ನಂತರ ಮೈಸೂರಿನಲ್ಲಿಯೇ ಹೆಚ್ಚಿನ ಪ್ರಕರಣ ಕಂಡುಬಂದಿವೆ. ಮೈಸೂರಿನಲ್ಲಿ ೩೫ ಮಂದಿ ಈ ಡೆಂಗ್ಯೂ ಗೆ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ಈ ಡೆಂಗ್ಯೂಯಿಂದ ಮೈಸೂರಿನಲ್ಲಿ ಇಬ್ಬರು ಬಲಿಯಾಗಿರುವುದು ನಿಜಕ್ಕೂ ಜನರಲ್ಲಿ ಸಾಕಷ್ಟು ಆತಂಕವನ್ನುಂಟು ಮಾಡಿದೆ. ಮೂರು ದಿನಗಳ ಹಿಂದೆಯಷ್ಟೆ ಹುಣಸೂರು ಸಮುದಾಯದ ಆರೋಗ್ಯ ಅಧಿಕಾರಿಯೊಬ್ಬರು ಡೆಂಗ್ಯೂಗೆ ಸಾವನ್ನಪ್ಪಿದ್ರು. ಕಳೆದ ಭಾನುವಾರ (ಜು೭ ) ಜಯದೇವ ಹೃದ್ರೋಗ ಆಸ್ಪತ್ರೆಯ ಡಾಟಾ ಎಂಟ್ರಿ ಆಪರೇಟರ್‌ ಒಬ್ಬರು ಈ ಸೋಂಕಿಗೆ ಬಲಿಯಾಗಿದ್ದಾರೆ.

ಇನ್ನು ರಾಜ್ಯದಲ್ಲಿ ೩೦೧ ಸಕ್ರಿಯ ಡೆಂಗ್ಯೂ ಪ್ರಕರಣಗಳು ಇದ್ದು, ಜುಲೈ ೭ ರ ಒಂದೇ ದಿನ ೧೫೯ ಹೊಸ ಪ್ರಕರಣಗಳು ಕಂಡು ಬಂದಿವೆ. ಇನ್ನು ಇದುವರೆಗೂ ರಾಜ್ಯದಲ್ಲಿ ೭೧೬೫ಕ್ಕೆ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಒಟ್ಟು ಆರು ಮಂದಿ ಸಾವನ್ನಪ್ಪಿದ್ದಾರೆ.

Tags:
error: Content is protected !!