Mysore
14
few clouds

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ಮೈಸೂರು ಪ್ರವಾಸಿ ಸ್ಥಳಗಳ ಪ್ರಚಾರಕ್ಕೆ ಆಯ್ದ ಸ್ಥಳಗಳಲ್ಲಿ ಸೈನ್ ಬೋರ್ಡ್ ಅಳವಡಿಕೆ

ಮೈಸೂರು ; ಪ್ರವಾಸೋದ್ಯಮವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಹಾಗೂ ಪ್ರವಾಸಿಗರನ್ನ ಆಕರ್ಷಿಸಲು ಮೈಸೂರು ನಗರ ಸೇರಿದಂತೆ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಪ್ರಚಾರಕ್ಕೆ ಡಿಜಿಟಲ್‌ ಸ್ಪರ್ಶ ನೀಡಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.

ನಗರದ ಪ್ರಮುಖ ರಸ್ತೆಗಳು ಮತ್ತು ವೃತ್ತಗಳೊಂದಿಗೆ ಹೆದ್ದಾರಿ ಸಂಪರ್ಕಿಸುವ ರಸ್ತೆಗಳಲ್ಲಿ ಡಿಜಿಟಲ್‌ ಸೈನ್‌ ಬೋರ್ಡ್‌ ಅಳವಡಿಸಲು ಚಿಂತನೆ ನಡೆಸಲಾಗಿದೆ. ಮೈಸೂರು ಅಂಬಾವಿಲಾಸ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ ಹೊರತಾಗಿ ಸಾಕಷ್ಟು ಪ್ರವಾಸಿ ತಾಣಗಳ ಬಗ್ಗೆ ಪ್ರವಾಸಿಗರಿಗೆ ಮಾಹಿತಿಯೇ ಇಲ್ಲ. ಹೀಗಾಗಿಯೇ ಕೆಲವೇ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಿಗೆ ಒಂದು ದಿನದಲ್ಲಿ ಭೇಟಿ ಕೊಟ್ಟು ಸಂಜೆಯೊಳಗೆ ಮೈಸೂರಿನಿಂದ ನಿರ್ಗಮಿಸುತ್ತಿದ್ದಾರೆ.

ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳು, ವಸ್ತು ಸಂಗ್ರಹಾಲಯಗಳು ಮೈಸೂರಿನಲ್ಲಿದ್ದರೂ ಕೂಡ ಪ್ರಚಾರದ ಕೊರತೆಯಿಂದಾಗಿ ಪ್ರವಾಸಿಗರು ಭೇಟಿ ಕೊಡುತ್ತಿಲ್ಲ. ಈಗಾಗಿ ಮೈಸೂರು ನಗರದಲ್ಲೆ ಇರುವ ಪ್ರವಾಸಿಗರ ದೃಷ್ಠಿಯಿಂದ ದೂರ ಉಳಿದ  ಸ್ಥಳಗಳ ಬಗ್ಗೆ ಸಮಗ್ರ ಮಾಹಿತಿ ಇರುವ ಕಿರು ಚಿತ್ರ ಸಿದ್ದಪಡಿಸಿ ಅವುಗಳನ್ನ ಬಳಸಿ ಪ್ರಚಾರ ಮಾಡಲು ಪ್ರವಾಸೋದ್ಯಮ ಇಲಾಖೆಯು ಯೋಜನೆ ರೂಪಿಸಿದೆ.

Tags:
error: Content is protected !!