Mysore
18
clear sky

Social Media

ಗುರುವಾರ, 12 ಫೆಬ್ರವರಿ 2026
Light
Dark

Mysuru dasara: ರತ್ನ ಖಚಿತ ಸಿಂಹಾನ ಜೋಡಣೆ ಪೂರ್ಣ: ಅ.3ರಿಂದ ಖಾಸಗಿ ದರ್ಬಾರ್‌ ಆರಂಭ

ಮೈಸೂರು: ನಾಡಹಬ್ಬ ಮೈಸೂರು ದಸರಾಕ್ಕೆ ದಿನಗಣನೆ ಶುರುವಾಗಿದ್ದು, ಸಿದ್ಧತೆಯು ಜೋರಾಗಿದೆ. ಅಂಬಾವಿಲಾಸ ಅರಮನೆಯಲ್ಲಿ ರತ್ನ ಖಚಿತ ಸಿಂಹಾಸನದ ಜೋಡಣಾ ಕಾರ್ಯ ಇಂದು ಮುಗಿದಿದ್ದು, ಅ.3 ರಿಂದ ಖಾಸಗಿ ದರ್ಬಾರ್‌ ನಡೆಯಲಿದೆ.

ನವರಾತ್ರಿಯ ಸಮಯದಲ್ಲಿ ರಾಜವಂಶಸ್ಥರಿಂದ ಅರಮನೆಯಲ್ಲಿ ಖಾಸಗಿ ದರ್ಬಾರ್‌ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ, ಸಿಂಹಾಸನ ಜೋಡಣೆಯು ವಿಧಿ ವಿಧಾನದಂತೆ ನೆರೆವೇರಿತ್ತು. ಬಳಿಕ ಪಟ್ಟದ ಹಸು, ಕುದುರೆ, ಆನೆ, ಅಶ್ವಗಳೂ ಗೋ ಶಾಲೆಗೆ ಆಗಮಿಸಿದವು.

ಜೋಡಣೆ ಹೇಗೆ?
ಅರಮನೆಯ ಸ್ಟ್ರಾಂಗ್‌ ರೂಂ ನಲ್ಲಿರುವ ಸಿಂಹಾಸನವನ್ನು ಟ್ರಾಲಿ ಮೂಲಕ ದರ್ಬಾರ್‌ ಹಾಲ್‌ಗೆ ತರಲಾಗುತ್ತದೆ. ಸಿಂಹಾಸನದಲ್ಲಿ ಅಧೋಭಾಗ, ಮಧ್ಯಭಾಗ, ಮೇಲ್ಭಾಗ ಎಂಬ ಮೂರು ಭಾಗಗಳಿವೆ. ಜತೆಗ ಮುಖ್ಯ ಆಸನ, ಮೆಟ್ಟಿಲು ಮತ್ತು ಬಂಗಾರದ ಛತ್ರಿಯಿದೆ. ಈ ರಾಜಗದ್ದುಗೆಯನ್ನು ಮೂಲತಃ ಅಂಜೂರ ಮರದಿಂದ ತಯಾರಿಸಲಾಗಿದೆ. ಇದಕ್ಕೆ ಆನೆಯ ದಂತ ಪಟ್ಟಿಗಳನ್ನು ಸಹ ಅಳವಡಿಸಲಾಗಿದೆ. ಈ ಎಲ್ಲಾ ಭಾಗಗಳನ್ನು ಬೇರ್ಪಡಿಸಿ ಮತ್ತೆ ಜೋಡೆಣೆ ಮಾಡುವ ತಾಂತ್ರಿಕತೆ ಇದೆ. ಈ ಜೋಡಣೆಯು ಒಂದು ಕಲೆಯಾಗಿದೆ.

ಜತೆಗೆ ಈ ಸಿಂಹಾಸನವನ್ನು ಜೋಡಿಸುವ ಕೆಲಸವನ್ನು ಗೆಜ್ಜಗಳ್ಳಿಯ ಗ್ರಾಮಸ್ಥರು ನಿರ್ವಹಿಸುತ್ತಾರೆ. ರಾಜ ಮಹಾರಾಜರ ಕಾಲದಿಂದಲೂ ಇವರೇ ಸಿಂಹಾಸನ ಜೋಡಣೆಯ ಸಿದ್ಧಹಸ್ತರು. ಅರಮನೆಯ ಪರಿಚಾರಕರು ಗೆಜ್ಜೆಗಳ್ಳಿಗೆ ಹೋಗಿ ವೀಳ್ಯ ಕೊಟ್ಟು ಆಹ್ವಾನ ನೀಡುತ್ತಾರೆ.

Tags:
error: Content is protected !!