ಮೈಸೂರು : ರಸ್ತೆ ಅಗಲೀಕರಣ ನೆಪದಲ್ಲಿ ಎಸ್‌ಪಿ ಕಚೇರಿ ಬಳಿಯ 40 ಮರಗಳ ಮಾರಣ ಹೋಮ ಮಾಡಿರುವ ಸ್ಥಳದಲ್ಲಿ ಇಂದು(ಏ.18) ವಿದ್ಯಾರ್ಥಿಗಳಿಂದ ಶ್ರದ್ಧಾಂಜಲಿ ಸಮರ್ಪಣೆ ಮಾಡಲಾಯಿತು.
ಪಾಲಿಕೆ ನಡೆ ಬಗ್ಗೆ ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿರುವ ಪರಿಸರವಾದಿಗಳು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಕಡಿದ ಮರಗಳಿಗೆ ಶ್ರದ್ಧಾಂಜಲಿ ಅರ್ಪಣೆ ಮಾಡಿದ್ದಾರೆ.
ಇಂದು ಸಂಜೆ ಕ್ಯಾಡಲ್ ಲೈಟ್ ಮೂಲಕ ಶ್ರದ್ಧಾಂಜಲಿ ಸಮರ್ಪಣೆ ಮಾಡಲಿದ್ದಾರೆ. ಇದಕ್ಕೂ ಮುಂಚೆ ಕಾವಾದ ಇಬ್ಬರು ವಿದ್ಯಾರ್ಥಿಗಳಿಂದ ಬಿಳಿ ಬಟ್ಟೆ ಹಾಕಿ, ಹೂವು ಇಟ್ಟು ಪೂಜೆ ಮಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಕಾವಾ ಕಾಲೇಜಿನ ವಿದ್ಯಾರ್ಥಿಗಳಾದ ವಿಶಾಲ್ ಮತ್ತು ಆದಿತ್ಯ ರಾಜ್ ಕಟಾವು ಮರಗಳ ಕಾಂಡಕ್ಕೆ ಬ್ಯಾಂಡೇಜ್ ಕಟ್ಟಿ ಬಿಳಿ ಹೊದಿಸಿ ಹೂವು ಗಂಧದ ಕಡ್ಡಿ ಇಟ್ಟು ಕೈ ಮುಗಿದು ಪೂಜೆ ಸಲ್ಲಿಕೆ ಮಾಡಿದರು.





