Mysore
21
clear sky

Social Media

ಗುರುವಾರ, 19 ಫೆಬ್ರವರಿ 2026
Light
Dark

ಮೈಸೂರು: ʼಮಹಾರಾಜ ಕಾಲೇಜಿನ ಚರಿತ್ರೆʼ ಗ್ರಂಥ ರೂಪಕ್ಕಿಳಿಸಲು ಒಡಂಬಡಿಕೆ

ಮೈಸೂರು: “ಮಹಾರಾಜ ಕಾಲೇಜು-ಒಂದು ಚಾರಿತ್ರಿಕ ಬೆಳವಣಿಗೆ (1833-1956)” ವಿಷಯಕ್ಕೆ ಸಂಬಂಧಿಸಿದಂತೆ ಸಂಶೋಧನೆ ನಡೆಸಿ ಮಾಹಿತಿಗಳನ್ನು ಗ್ರಂಥ ರೂಪದಲ್ಲಿ ಪ್ರಕಟಿಸಲು ಮೈಸೂರು ವಿಶ್ವವಿದ್ಯಾನಿಲಯವು ದಿ ಮಿಥಿಕ್ ಸೊಸೈಟಿಯೊಡನೆ ಒಡಂಬಡಿಕೆಗೆ ಸಹಿ ಹಾಕಿದೆ.

ಮಹಾರಾಜ ಕಾಲೇಜಿನ ಪ್ರಾಧ್ಯಾಪಕರುಗಳಾದ ಡಾ. ರೋಹಿತ ಈಶ್ವರ, ಡಾ. ಪವಮಾನ ಹಾಗೂ ಡಾ. ಗ್ಯಾವಿನ್ ಜೂಡ್ ವಿಲ್ಸನ್ ರವರು ಸಂಶೋಧನೆಯಲ್ಲಿದ್ದಾರೆ. ಇವರೊಂದಿಗೆ ಇತಿಹಾಸಕಾರರಾದ ಡಾ. ನರೇಂದ್ರ ಪ್ರಸಾದ್ ಇರಲಿದ್ದಾರೆ. ಭಾರತದ ಪತ್ರಗಾರ ಹಾಗೂ ಇತರ ಗ್ರಂಥಾಲಯಗಳಲ್ಲಿ ಲಭ್ಯವಿರುವ ಎಲ್ಲಾ ದಾಖಲಿತ ಮಾಹಿತಿಯ ಸಂಗ್ರಹಣೆ ಮಾಡಿ ಗ್ರಂಥ ರಚಿಸಲಾಗುವುದು.

ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರಾದ ಎಂ.ಕೆ. ಸವಿತಾ, ಕುಲಪತಿ ಪ್ರೊ. ಎನ್.ಕೆ. ಲೋಕನಾಥ್‌ ಅವರ ಸಮ್ಮುಖದಲ್ಲಿ ಒಡಂಬಡಿಕೆಗೆ ಸಹಿ ಹಾಕಿದರು. ಪರೀಕ್ಷಾ ಕುಲ ಸಚಿವರಾದ ಡಾ.ಎನ್.ನಾಗರಾಜು, ಹಣಕಾಸು ಅಧಿಕಾರಿ ರೇಖಾ ಉಪಸ್ಥಿತರಿದ್ದರು.

ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ಡಾ.ಎಸ್ ರವಿ ಅವರು ಮಿಥಿಕ್ ಸೊಸೈಟಿಯ ಪರವಾಗಿ ಒಡಂಬಡಿಕೆಗೆ ಸಹಿ ಹಾಕಿದರು.

Tags:
error: Content is protected !!