Mysore
30
overcast clouds

Social Media

ಭಾನುವಾರ, 12 ಏಪ್ರಿಲ 2026
Light
Dark

ಮೈಸೂರು ಮೃಗಾಲಯದ ಹುಲಿ ʼಪೃಥ್ವಿʼ ಇನ್ನಿಲ್ಲ

ಮೈಸೂರು : ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ತನ್ನ ಕಟ್ಟುಮಸ್ತಿನ ಆಕಾರದಿಂದ ಸಂದರ್ಶಕರನ್ನು ಆಕರ್ಷಿಸುತ್ತಿದ್ದ ಗಂಡು ಹುಲಿ ‘ಪೃಥ್ವಿ’ ಅನಾರೋಗ್ಯ ಕಾರಣಗಳಿಂದ ಬುಧವಾರ ಸಾವನ್ನಪ್ಪಿದೆ.

‘ಕಂಜೆನಿಟಲ್ ಪರೇಸಿಸ್’ ರೋಗಕ್ಕೆ ತುತ್ತಾಗಿ ಕಳೆದೆರಡು ದಿನಗಳಿಂದ ಆಹಾರವನ್ನು ತ್ಯಜಿಸಿ ಬಳಲುತ್ತಿದ್ದ 13 ವರ್ಷದ ಪೃಥ್ವಿಗೆ (ರಾಯಲ್ ಬೆಂಗಾಲ್ ಟೈಗರ್) ಮೃಗಾಲಯದ ಪಶು ವೈದ್ಯಾಧಿಕಾರಿಗಳು ಸೂಕ್ತ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಪೃಥ್ವಿ ಬುಧವಾರ ಬೆಳಿಗ್ಗೆ ಕೊನೆಯುಸಿರೆಳೆಯಿತು. ಪೃಥ್ವಿ ಸಾವನ್ನಪ್ಪಿರುವ ವಿಷಯವನ್ನು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:
error: Content is protected !!