Mysore
27
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ಮೈಸೂರು ವಿವಿ | ರಸ್ತೆ ಮೇಲೆ ಹರಿಯುತ್ತಿರುವ ಯುಜಿಡಿ ನೀರು

Mysore University

ಮೈಸೂರು : ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿ ಕ್ಯಾಂಪಸ್ ನಲ್ಲಿ ಯುಜಿಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ.

ಯುಜಿಡಿ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ಅದರ ಮೇಲೆ ವಾಹನಗಳು ಓಡಾಡುವಾಗ ವಿದ್ಯಾರ್ಥಿಗಳ ಮೈಮೇಲೆ ಸಿಂಪಡಣೆ ಆಗುತ್ತಿದೆ.

ಇದನ್ನೂ ಓದಿ:- ಗ್ರೇಟರ್ ಬೆಂಗಳೂರಿಗೆ ಶೀಘ್ರವೇ ಚುನಾವಣೆ : ಡಿಸಿಎಂ ಡಿ.ಕೆ ಶಿವಕುಮಾರ್

ವಿವಿಯ ಕನ್ನಡ ಹಾಗೂ ಜೈನಾಲಜಿ ವಿಭಾಗದ ಪ್ರವೇಶ ದ್ವಾರದ ಬಳಿಯೇ ಮ್ಯಾನ್ ಹೋಲ್‌ ತೆರೆದಿರುವುದರಿಂದ ನೀರು ಹೊರ ಹರಿಯುತ್ತಿದೆ. ಇದರಿಂದ ದುರ್ವಾಸನೆ ಹೊರ ಸೂಸುತ್ತಿದ್ದು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ವಿವಿ ಗಮನಕ್ಕೂ ತಂದರು ನಿರ್ಲಕ್ಷ್ಯ ವಹಿಸಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Tags:
error: Content is protected !!