ಮೈಸೂರು: ನಗರದ ಪ್ರತಿಷ್ಠಿತ ಮೈಸೂರು ರೇಸ್ ಕ್ಲಬ್ ಸದಸ್ಯರಾಗಿ ಗೀತಿಕಾ ಬಸಪ್ಪ (152 ಮತ), ಡಾ.ಕೆ.ರವಿ (147), ಕಲೆಂಗಡ ಮಂದಣ್ಣ ನಾಣಯ್ಯ (133), ಮೊಹಮ್ಮದ್ ಸಲ್ಮಾನ್ (126), ಎ.ಎಸ್.ಶಿವಸ್ವರೂಪ್ (123) ಅವರು ಚುನಾಯಿತರಾಗಿದ್ದಾರೆ.
ಕ್ಲಬ್‌ನಲ್ಲಿ ಖಾಲಿ ಇದ್ದ 5 ಸದಸ್ಯ ಸ್ಥಾನಗಳಿಗೆ ಮಾ.30 ರಂದು ಕ್ಲಬ್ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 9 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಸೋಮವಾರ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ನಡೆದ ಮತದಾನದಲ್ಲಿ ಒಟ್ಟು 201 ಮತಪತ್ರಗಳು ದಾಖಲಾಗಿತ್ತು. ಇವುಗಳಲ್ಲಿ 2 ಮತಪತ್ರಗಳು ಅನೂರ್ಜಿತಗೊಂಡಿದ್ದು, 199 ಮತಪತ್ರಗಳು ಸಿಂಧುವಾಗಿದ್ದವು. 995 ಮತಗಳನ್ನು ದಾಖಲೆಗೆ ಪರಿಗಣಿಸಲಾಯಿತು.
ಉಳಿದಂತೆ ಸ್ಪರ್ಧಾ ಕಣದಲ್ಲಿದ್ದ ಅಯ್ಯಪ್ಪ ಮಂಡೆಪಂಡ ಪೊನ್ನಪ್ಪ (110 ಮತ), ಡಾ.ಚೇತನ್ ರಾಜಣ್ಣ ಚಂದ್ರಕಾಂತ್ (87), ಜೇಡನ್ ಮಾಕ್ ಈಶ್ವರ್ (70 ), ಡಾ.ಕೆ.ಲಿಂಗರಾಜ್ (42 ಮತ) ಅವರು ಹಿನ್ನಡೆ ಅನುಭವಿಸಿದರು.
ಪ್ರಜಾಪ್ರಭುತ್ವದ ಮಾದರಿಯಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಮತ್ತು ಮತದಾನ ಮಾಡಿದ ಸದಸ್ಯರೆಲ್ಲರಿಗೂ ಮೈಸೂರು ರೇಸ್ ಕ್ಲಬ್ ಅಭಾರಿಯಾಗಿದೆ ಎಂದು ಎಂಆರ್‌ಸಿ ಕಾರ್ಯದರ್ಶಿ ಮತ್ತು ಸಿಇಒ ಎನ್‌ಎಚ್‌ಎಸ್ ಮಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





