ಮೈಸೂರು: ಜಗತ್ಪ್ರಸಿದ್ಧ ಮೈಸೂರು ಅರಮನೆಯ ಪ್ರವೇಶ ಟಿಕೆಟ್‌ಗಳನ್ನು ವಾಟ್ಸಪ್‌ನಲ್ಲೂ ಪಡೆಯುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.
ರಾಜ್ಯ ಸರ್ಕಾರದ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯದಿಂದ ಮೊಬೈಲ್ ಫೋನ್ ಮೂಲಕ ಟಿಕೆಟ್ ಖರೀದಿಸಬಹುದಾಗಿದೆ.
ವಾಟ್ಸಪ್ ಟಿಕೆಟಿಂಗ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು, ಇದರಿಂದ ಪ್ರವಾಸಿಗರಿಗೆ ಅರಮನೆ ಪ್ರವೇಶ ಮತ್ತಷ್ಟು ಸುಲಭವಾಗಲಿದ್ದು, ಅತಿ ಸುಲಭವಾಗಿ ಟಿಕೆಟ್ ಪಡೆಯಬಹುದಾಗಿದೆ.
ಇದರ ಜೊತೆಗೆ ಪ್ರವಾಸಿಗರ ಸಮಯವೂ ಕೂಡ ಉಳಿತಾಯವಾಗಲಿದ್ದು, ಈ ಬಗ್ಗೆ ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಮಾಹಿತಿ ನೀಡಿದ್ದಾರೆ.
ಈ ಉಪಕ್ರಮ ಇಂದಿನಿಂದಲೇ ಜಾರಿಗೆ ಬಂದಿದ್ದು, ವಾಟ್ಸಪ್ ಸಂಖ್ಯೆ:8884160088ಗೆ Hi ಎಂದು ಟೈಪ್ ಮಾಡುವ ಮೂಲಕ ಟಿಕೆಟ್ ಖರೀದಿಸಬಹುದಾಗಿದೆ. ಆ ಟಿಕೆಟ್‌ಗಳ ವ್ಯಾಲಿಡಿಟಿ ಖರೀದಿಸಿದ ದಿನದಿಂದ ಐದು ದಿನಗಳವರೆಗೆ ಇರುತ್ತದೆ.
ಇನ್ನು ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ಅರಮನೆಯನ್ನು ವೀಕ್ಷಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.