ಮೈಸೂರು: ಮೈಸೂರು ಅರಮನೆಯ ಪ್ರಸಿದ್ಧ ಚಿನ್ನದ ಅಂಬಾರಿ ವೀಕ್ಷಣೆಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಈ ಮೂಲಕ ಮೈಸೂರಿಗೆ ಬರುವ ಪ್ರವಾಸಿಗರಿಗೆ ನಿರಾಸೆ ಉಂಟಾಗಿದೆ ಎನ್ನಲಾಗುತ್ತಿದೆ.
ಅಂಬಾರಿಯ ಕೆಳಭಾಗ ಹಾಗೂ ಹಿಂಭಾಗ ಮರದ ಕೆಲಸ ಹಾಗೂ ರಿಪೇರಿ ಕಾರ್ಯಗಳು ನಡೆಯುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅರಮನೆ ಆಡಳಿತ ಮಂಡಳಿ ತಿಳಿಸಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಇದು ಭಾರೀ ನಿರಾಸೆಯನ್ನುಂಟು ಮಾಡಿದ್ದು, ಅಂಬಾರಿಯ ಸಂರಕ್ಷಣೆಗಾಗಿ ಈ ಕ್ರಮ ಕೈಗೊಂಡಿರುವುದು ಅವಶ್ಯಕವಾಗಿದೆ.
ಮೈಸೂರು ಅರಮನೆ ಹಾಗೂ ಅಂಬಾರಿಯನ್ನು ವೀಕ್ಷಿಸಲು ಸಾವಿರಾರು ಜನರು ಸಾಂಸ್ಕೃತಿಕ ನಗರಿ ಮೈಸೂರಿಗೆ ಬರುತ್ತಾರೆ. ಅಂಬಾರಿಯನ್ನು ನೋಡಿ ಖುಷಿಪಡುತ್ತಾರೆ. ಆದರೆ ಕೆಲ ದಿನಗಳ ಕಾಲ ಅಂಬಾರಿ ವೀಕ್ಷಣೆಗೆ ಅವಕಾಶವಿರುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು, ಪ್ರವಾಸಿಗರಿಗೆ ಭಾರೀ ನಿರಾಸೆಯಾಗಿದೆ ಎನ್ನಲಾಗುತ್ತಿದೆ.