ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಾಗುತ್ತಿದ್ದಂತೆ ಅಲರ್ಟ್ ಆದ ಲೋಕಾಯುಕ್ತ ಎಸ್‌ಪಿ, ಪ್ರಕರಣದ ತನಿಖೆ ನಡೆಸಲು ನಾಲ್ಕು ತಂಡ ರಚನೆ ಮಾಡಿದೆ.
ಮೈಸೂರು ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ಎ1 ಆರೋಪಿಯಾಗಿದ್ದು, ಸಿಎಂಗೆ ತನಿಖೆಯ ಟೆನ್ಷನ್ ಶುರುವಾಗಿದೆ.
ಇಂದು ಮತ್ತು ನಾಳೆ ಲೋಕಾಯುಕ್ತ ಕಚೇರಿಗೆ ರಜೆ ಇದ್ದು, ಸೋಮವಾರದಿಂದ ಅಧಿಕೃತ ತನಿಖೆ ಶುರುವಾಗಲಿದೆ.
ಮೂರು ತಿಂಗಳ ಒಳಗಾಗಿ ಕೋರ್ಟ್‌ಗೆ ತನಿಖಾ ವರದಿ ಸಲ್ಲಿಸಬೇಕಾಗಿರುವುದರಿಂದ ತನಿಖೆ ಚುರುಕಾಗಿಯೇ ನಡೆಯಲಿದೆ ಎಂದು ಹೇಳಲಾಗುತ್ತಿದ್ದು, ಸೋಮವಾರದಿಂದ ಮುಡಾ ಅಸಲಿ ಆಟ ಶುರುವಾಗಲಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಸಿಎಂ ಸಿದ್ದರಾಮಯ್ಯ ಕಾನೂನು ಹೋರಾಟ ಆರಂಭಿಸಲು ಬಿಗ್ ಪ್ಲಾನ್ ರೂಪಿಸಿದ್ದು, ಕಾನೂನು ಸಲಹೆಗಾರರ ಜೊತೆ ಸುದೀರ್ಘ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ.