Mysore
18
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಮುಡಾ ಪ್ರಕರಣ: ಲೋಕಾಯುಕ್ತ ಮೊದಲ ಹಂತದ ತನಿಖೆಯಲ್ಲಿ ಹಲವು ದಾಖಲೆಗಳು ಸೀಜ್

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಎ3 ಆರೋಪಿ ಮತ್ತು ಎ4 ಆರೋಪಿಯನ್ನು ಮೈಸೂರು ಲೋಕಾಯುಕ್ತ ಮೊದಲ ಹಂತದಲ್ಲಿ ವಿಚಾರಣೆ ನಡೆಸಿದೆ. ಈ ಹಂತದಲ್ಲಿ ಅಧಿಕಾರಿಗಳು 1935 ರಿಂದ 2010ರ ವರೆಗಿನ ಎಲ್ಲಾ ದಾಖಲೆಗಳನ್ನು ಸೀಜ್‌ ಮಾಡಿದ್ದಾರೆ ಎಂದು ಲೋಕಾಯುಕ್ತ ತಿಳಿಸಿದೆ.

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಎ3 ಆರೋಪಿ ಮಲ್ಲಿಕಾರ್ಜುನಸ್ವಾಮಿ ಹಾಗೂ ಎ4 ಆರೋಪಿ ದೇವರಾಜು ಅವರನ್ನು ಸುಮಾರು 10 ಗಂಟೆಗಳ ಕಾಲ ತನಿಖೆ ಸಲುವಾಗಿ ವಿಚಾರಣೆ ನಡೆಸಲಾಯಿತು. ಈ ವಿಚಾರಣೆಯಲ್ಲಿ ಇಬ್ಬರು ಆರೋಪಿಗಳಿಂದ 1935 ರಿಂದ 2010 ರವರೆಗೆ ಎಲ್ಲಾ ವ್ಯವಹಾರದ ಬಗ್ಗೆ ಮಾಹಿತಿ ಪಡೆಯಲಾಯಿತು. ಅಲ್ಲದೇ ಈ ವೇಳೆ ಕೆಸರೆಯಲ್ಲಿನ ಸರ್ವೇ ನಂ.426ರ 3 ಕಾಲು ಎಕರೆ ನಿವೇಶನದ ವಾರಸುದಾರಿಕೆ ಕುರಿತು ವಿಚಾರಣೆಯಲ್ಲಿ ಚರ್ಚಿಸಲಾಯಿತು.

ಈ ಪ್ರಕರಣದ ಬಗ್ಗೆ ವಿಚಾರಣೆಯಲ್ಲಿ ಎ3 ಆರೋಪಿಯಿಂದ ಅನೇಕ ದಾಖಲೆಗಳ ಮಾಹಿತಿಯನ್ನು ಕೆಲಹಾಕಿತ್ತು. ತದನಂತರ ಎ4 ಆರೋಪಿ ದೇವರಾಜು ಅವರು ಲೋಕಾಯುಕ್ತಕ್ಕೆ ಹಲವು ದಾಖಲೆಗಳನ್ನು ಸಲ್ಲಿಸಿದರು ಎಂದು ಹೇಳಿದೆ.

ಮುಡಾ ಪ್ರಕರಣದ ಎರಡನೇ ಹಂತದ ತನಿಖೆ ಅಕ್ಟೋಬರ್‌.14ರಂದು ನಡೆಯಲಿದೆ. ಬಳಿಕ, ಮುಂದಿನ ಹತ್ತು ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಪಾರ್ವತಿ ಸಿದ್ದರಾಮಯ್ಯ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

 

Tags:
error: Content is protected !!