Mysore
21
overcast clouds

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

ಮೈಸೂರು: ಮೂಡಾ ಕಛೇರಿ ಕೆಲಸ ಕಾರ್ಯಗಳು ಮತ್ತೆ ಆರಂಭ

ಮೈಸೂರು: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ (ಮೂಡಾ) ಕಛೇರಿಯ ದೈನಂದಿನ ಕೆಲಸ ಕಾರ್ಯಕ್ಕೆ ಸರ್ಕಾರ ಗ್ರೀನ್‌ ಸಿಗ್ನಲ್‌ ನೀಡಿದ್ದು, ಕೆಲಸ ಕಾರ್ಯವನ್ನು ಪ್ರಾರಂಭ ಮಾಡುವಂತೆ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಲತಾ ಸೂಚಿಸಿದ್ದಾರೆ.

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಹಗರಣಗಳನ್ನು ನ್ಯಾಯಾಂಗ ತನಿಖೆಗೆ ವಹಿಸಿದ ಹಿನ್ನೆಲೆ ಮೂಡಾ ಕಾರ್ಯಗಳು ತಾತ್ಕಲಿಕವಾಗಿ ಸ್ಥಗಿತಗೊಂಡಿದ್ದವು.

ಕಂದಾಯ ಪಾವತಿ, ನಕ್ಷೆಗೆ ಅನೋಮೊದನೆ, ಕಟ್ಟಡ ವಿನ್ಯಾಸ, ನ್ಯಾಯಾಂಗ ಕಡತ, ಲೋಕ ಅದಾಲತ್‌ ಪ್ರಕರಣಗಳನ್ನು ಮುಂದುವರೆಸುವಂತೆ ಮೂಡಾ ಆಯುಕ್ತರಿಗೆ ನಗರಾಭಿವೃದ್ಧಿ ಕಾರ್ಯದರ್ಶಿ ಕೆ.ಲತಾ ಪತ್ರ ಬರೆದಿದ್ದಾರೆ.

ತಾತ್ಕಲಿಕ ಸ್ಥಗಿತದಿಂದ ಮೂಡ ಕೆಲಸ ಆಗದೆ ಜನ ಕಂಗಲಾಗಿದ್ದರು. ಇದೀಗ ಮತ್ತೆ ಕೆಲಸ ಕಾರ್ಯ ಪ್ರಾರಂಭವಾಗಿದ್ದು, ಜನ ನಿಟ್ಟುಸಿರು ಬಿಟ್ಟಿದ್ದಾರೆ.

Tags:
error: Content is protected !!