Mysore
27
broken clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಮೈಸೂರು ಮುಡಾ ಕೇಸ್:‌ ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ಎಂ.ಲಕ್ಷ್ಮಣ್‌

ಮೈಸೂರು: ಸ್ನೇಹಮಯಿ ಕೃಷ್ಣಗೆ ಫಂಡಿಂಗ್‌ ಮಾಡುತ್ತಿರುವವರು ಯಾರು ಅನ್ನೋದು ಗೊತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಕಿಡಿಕಾರಿದ್ದಾರೆ.

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ನಿನ್ನೆ ಗಂಭೀರ ಆರೋಪ ಮಾಡಿದ್ದರು. ಇಬ್ಬರು ವ್ಯಕ್ತಿಗಳು ನನಗೆ ಹಣದ ಆಮಿಷವೊಡ್ಡಲು ಬಂದಿದ್ದರು ಎಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಈ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಲಕ್ಷ್ಮಣ್‌ ಅವರು, ಸ್ನೇಹಮಯಿ ಕೃಷ್ಣಗೆ ಫಂಡಿಂಗ್‌ ಮಾಡುವವರು ಯಾರು ಅನ್ನೋದು ಗೊತ್ತಿದೆ ಎಂದು ಕಿಡಿಕಾರಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಯಾವುದೇ ಕಾರಣಕ್ಕೂ ಅಂತಹ ಕೀಳು ಮಟ್ಟಕ್ಕೆ ಇಳಿಯುವವರಲ್ಲ. ಸ್ನೇಹಮಯಿ ಕೃಷ್ಣ ಅವರೇ ಹಣದ ಆಮಿಷಕ್ಕೆ ಒಳಗಾಗಿ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸುಳ್ಳು ಪತ್ರ ನೀಡಿದ್ದಾರೆ ಎಂದರು.

ಸ್ನೇಹಮಯಿ ಕೃಷ್ಣ ಆಮಿಷಕ್ಕೆ ಒಳಗಾಗದಿದ್ದರೆ ಇವರ ಪುತ್ರ ಏಕೆ ಹರ್ಷ ಮತ್ತು ಶ್ರೀನಿಧಿ ಜೊತೆ ಹೋದರು. ಈ ದೂರಿಗೆ ಸಂಬಂಧಿಸಿದಂತೆ ಅಂದಿನ ಇಡೀ ದಿನದ ಫುಟೇಜ್‌ ನೀಡದೇ ಬೆಳಿಗ್ಗೆ 10.30ರ ಫುಟೇಜ್‌ ಮಾತ್ರ ನೀಡಿದ್ದಾರೆ. ನಮ್ಮ ಬಳಿಯೂ ಕೆಲವು ಫುಟೇಜ್‌ಗಳಿವೆ ಅವುಗಳನ್ನು ಪೊಲೀಸರಿಗೆ ನೀಡುತ್ತೇವೆ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಅವರು, ನೀವು ಯಾರ ಬಳಿಯೂ ಆಮಿಷಕ್ಕೆ ಒಳಗಾಗಿಲ್ವಾ? ಎಂದು ಪ್ರಶ್ನಿಸಿದರು. ಈ ಕೇಸ್‌ಗೆ ಸಂಬಂಧಿಸಿದಂತೆ ನ್ಯಾಯಾಲಯದ ಹೋರಾಟ ಮಾಡಲು ನಿಮಗೆ ಹಣ ಎಲ್ಲಿಂದ ಬರುತ್ತೆ? ನಿಮಗೆ ಸಂಪೂರ್ಣ ಬೆಂಬಲ ನೀಡುತ್ತಿರುವುದು ಯಾರು ಎಂದು ಎಲ್ಲವೂ ಗೊತ್ತಿದೆ. ಈ ಕೇಸ್‌ನಲ್ಲಿ ಸ್ನೇಹಮಯಿ ಕೃಷ್ಣನದು ಕೇವಲ ಸೈಡ್‌ ರೋಲ್‌ ಅಷ್ಟೇ ಆದರೆ ಡೈರೆಕ್ಟರ್‌, ನಿರ್ಮಾಪಕರು ಬೇರೆ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.

 

Tags:
error: Content is protected !!