Mysore
20
clear sky

Social Media

ಗುರುವಾರ, 29 ಜನವರಿ 2026
Light
Dark

ಮೈಸೂರು ಮುಡಾ ಕೇಸ್‌ ತನಿಖೆಗೆ ಲೋಕಾಯುಕ್ತ ಎಂಟ್ರಿ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮಗಳು ಬಗೆದಷ್ಟು ಬಯಲಾಗ್ತಿವೆ. ಈ ಹೊತ್ತಲ್ಲೆ ಮುಡಾ ತನಿಖೆಗೆ ಲೋಕಾಯುಕ್ತ ಎಂಟ್ರಿಕೊಟ್ಟಿದೆ.

ಮೈಸೂರು ಹಿನಕಲ್‌ನ ಸರ್ವೆ ನಂಬರ್‌ 89ರ 7.18 ಎಕರೆ ಭೂಮಿಯನ್ನು 350ಕ್ಕೂ ಹೆಚ್ಚು ಪ್ರಭಾವಿಗಳು ಅಧಿಕಾರಿಗಳಿಗೆ ನಿವೇಶನ ರೂಪದಲ್ಲಿ ನೀಡಿರುವ ಸಂಬಂಧ ಲೋಕಾಯುಕ್ತ ತನಿಖೆಗೆ ಇಳಿದಿದೆ.

ಕಳೆದ 2017ರ ಅವಧಿಯಲ್ಲಿ ಪ್ರಾಧಿಕಾರದಲ್ಲಿ ಕೆಲಸ ಮಾಡಿದ್ದ 18 ಅಧಿಕಾರಿಗಳಿಗೆ ಲೋಕಾಯುಕ್ತ ನೋಟಿಸ್‌ ನೀಡಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಮುಡ ಆಯುಕ್ತರ ನಿವಾಸದಲ್ಲಿದ್ದ ಸಿಸಿ ಕ್ಯಾಮರಾ, ಡಿವಿಆರ್‌ ನಾಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇನ್ನು ಮುಡಾ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಕುರ್ಚಿ ತೊರೆಯುವ ಸನ್ನಿವೇಶ ಸೃಷ್ಟಿಯಾದ್ರೆ ಸಿಎಂ ಆಗೋಣ ಎಂದು ಹಲವು ಕಾಂಗ್ರೆಸ್‌ ನಾಯಕರು ಕಾದು ಕುಳಿತಿದ್ದಾರೆ.

 

Tags:
error: Content is protected !!