ಮೈಸೂರು: ಅಂತರಾಜ್ಯ ಮನೆಗಳ್ಳನನ್ನು ಕುವೆಂಪು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 2.6 ಲಕ್ಷ ರೂ. ವೌಲ್ಯದ 20 ಗ್ರಾಂ ಚಿನ್ನಾಭರಣ, 310 ಗ್ರಾಂ ಬೆಳ್ಳಿ ಪದಾರ್ಥ ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಆಂಧ್ರದ ಗೋದಾವರಿ ಜಿಲ್ಲೆಯ ಪಾಲಂ ಗ್ರಾಮದವನಾದ ಆರೋಪಿಯ ಬಂಧನದಿಂದ ಕುವೆಂಪುನಗರ ಠಾಣೆಯಲ್ಲಿನ 3 ಕನ್ನ ಕಳ್ಳತನ ಪ್ರಕರಣ ಪತ್ತೆಯಾಗಿದೆ. ಆರೋಪಿಯ ವಿರುದ್ದ ಹುಬ್ಬಳ್ಳಿ, ಮಂಗಳೂರು ಪೊಲೀಸ್ ಠಾಣೆಗಳು ಹಾಗೂ ಆಂಧ್ರ ಪ್ರದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ ಮನೆ ಕಳ್ಳತನ ಕೃತ್ಯ ನಡೆಸಿರುವ ಸಂಬಂಧ ಪ್ರಕರಣ ದಾಖಲಾಗಿದೆ.





