Mysore
27
few clouds

Social Media

ಸೋಮವಾರ, 05 ಜನವರಿ 2026
Light
Dark

ಮೈಸೂರು | ವಸ್ತುಪ್ರದರ್ಶನದಲ್ಲಿ ಡ್ರಾಗನ್‌ ಬೋಟಿಂಗ್‌

ಮೈಸೂರು : ಮೈಸೂರು ನಗರಿಯೂ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಸ್ಥಳವಾಗಿದ್ದು, ಮೃಗಾಲಯ, ಚಾಮುಂಡಿ ಬೆಟ್ಟ, ಅರಮನೆ ಹೀಗೆ ಇಲ್ಲಿನ ಅನೇಕ ಪ್ರವಾಸಿ ತಾಣಗಳಿಗೆ ಪ್ರತಿ ದಿವಸವೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಈ ದೃಷ್ಟಿಯಿಂದ ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸಲು ಅರಮನೆಗೆ ಹೊಂದಿಕೊಂಡಂತೆ ಇರುವ ಕರ್ನಾಟಕ ವಸ್ತು ಪ್ರದರ್ಶನದಲ್ಲಿ ಇದೇ ಮೊದಲ ಬಾರಿಗೆ ಡ್ರಾಗನ್‌ ಬೋಟಿಂಗ್‌ ನಿರ್ಮಾಣ ಮಾಡಲಾಗಿದೆ.

ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರವೂ ಡ್ರಾಗನ್‌ ಬೋಟಿಂಗ್‌ನ್ನು ನಿರ್ಮಿಸಿದ್ದು, ಸುಮಾರು 3.59 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದೆ. ಈ ಡ್ರಾಗನ್‌ ಬೋಟಿಂಗ್‌ ವಸ್ತು ಪ್ರದರ್ಶನ ವೀಕ್ಷಿಸಲು ಬರುವ ಜನರನ್ನು ರಂಜಿಸಲು ಸಿದ್ಧವಾಗಿದೆ. ಡ್ರಾಗನ್‌ ಮಾದರಿ ಸುತ್ತಲೂ ಕೊಳವನ್ನು ನಿರ್ಮಿಸಿ, ಅಲ್ಲಿ ಬೋಟಿಂಗ್‌ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಶುಲ್ಕ ಪಾವತಿಸಿ ಬೋಟಿಂಗ್ ವಿಹಾರ ನಡೆಸಬಹುದಾಗಿದೆ.

ನಾಳೆ ಸಿಎಂ ಉದ್ಘಾಟನೆ
ದಸರಾ ವೇಳೆಗೆ ಉದ್ಘಾಟನೆ ಆಗಬೇಕಿದ್ದ ಈ ಡ್ರಾಗನ್‌ ಬೋಟಿಂಗ್‌ ಅನೇಕ ಕಾರಣಗಳಿಂದ ಉದ್ಘಾಟನೆ ಆಗಿರಲಿಲ್ಲ. ಅಂತಿಮವಾಗಿ ನಾಳೆ (ಜ.5)ಸಿಎಂ ಸಿದ್ದರಾಮಯ್ಯ ಅವರು ಡ್ರಾಗನ್‌ ಬೋಟಿಂಗ್‌ನ್ನು ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಸಾರ್ವಜನಿಕರು ಬೋಟಿಂಗ್‌ ವಿಹಾರವನ್ನು ನಡೆಸಬಹುದಾಗಿದೆ.

Tags:
error: Content is protected !!