Mysore
22
haze

Social Media

ಭಾನುವಾರ, 25 ಜನವರಿ 2026
Light
Dark

ಮೈಸೂರು| ಮನೆ ಮನೆಗೆ ಪೊಲೀಸ್‌ ವಿನೂತನ ಕಾರ್ಯಕ್ರಮಕ್ಕೆ ಚಾಲನೆ

mysureu police

ಮೈಸೂರು: ಮೈಸೂರು ನಗರ ಪೊಲೀಸ್‌ ಇಲಾಖೆ ವತಿಯಿಂದ ಇಂದು ಮನೆ ಮನೆಗೆ ಪೊಲೀಸ್‌ ಎಂಬ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕೆಎಸ್‌ಓಯು ಘಟಿಕೋತ್ಸವ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಖ್ಯಾತ ಕ್ರಿಕೆಟಿಗ ಜಾವಗಲ್‌ ಶ್ರೀನಾಥ್‌ ಉದ್ಘಾಟನೆ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಾವಗಲ್‌ ಶ್ರೀನಾಥ್‌ ಅವರು, ಸಮಾಜದಲ್ಲಿ ಒಳ್ಳೆಯವರು, ಕೆಟ್ಟವರು ಎಲ್ಲರೂ ಇರುತ್ತಾರೆ. ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಪೊಲೀಸರ ಪಾತ್ರ ಮಹತ್ವವಾಗಿದೆ. ಅನೇಕ ಜನರಿಗೆ ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ಗೊತ್ತಿರುವುದಿಲ್ಲ. ಈ ನಿಟ್ಟಿನಲ್ಲಿ ಪೊಲೀಸರ ಜೊತೆ ನಾವು ಕೈಜೋಡಿಸಬೇಕು. ಮನೆ ಮನೆಗೆ ಪೊಲೀಸ್‌ ಎಂಬ ಕಾರ್ಯಕ್ರಮ ಚೆನ್ನಾಗಿದೆ. ಉತ್ತಮ ಸಮಾಜ ನಿರ್ಮಾಣ ಮಾಡುವಾಗ ನಮ್ಮ ಪಾತ್ರವೂ ಇರಬೇಕು. ಪೊಲೀಸರು ನೀಡುವ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದರು.

ಮೈಸೂರು ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್‌ ಮಾತನಾಡಿ, ಗಾಂಜಾ ಮತ್ತು ಡ್ರಗ್ಸ್‌ ನಿರಂತರವಾಗಿ ಮಾರಾಟ ಮಾಡುವವರನ್ನು ಗಡಿಪಾರು ಮಾಡಲಾಗುವುದು. ಕಳೆದ ಮೂರು ದಿನಗಳಿಂದ ಆರು ಜನರನ್ನು ಬಂಧಿಸಲಾಗಿದೆ. 100ಕ್ಕೂ ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 60ಕ್ಕೂ ಹೆಚ್ಚು ಜನರು ಗಾಂಜಾ ಸೇವಿಸಿರುವುದು ಪತ್ತೆಯಾಗಿದೆ. ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಡಿಸಿಪಿಗಳಾದ ಬಿಂದುಮಣಿ, ಸುಂದರ್‌ ರಾಜ್‌ ಸೇರಿದಂತೆ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

Tags:
error: Content is protected !!