Mysore
26
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಮೈಸೂರು ದಸರಾ ಮಹೋತ್ಸವ: ಸೆಪ್ಟೆಂಬರ್.‌5ಕ್ಕೆ ಎರಡನೇ ಹಂತದ ಗಜಪಡೆ ಆಗಮನ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಕಲ ರೀತಿಯಲ್ಲೂ ಸಿದ್ಧತೆ ನಡೆಯುತ್ತಿದ್ದು, ಸೆಪ್ಟೆಂಬರ್.‌5ರಂದು ಮೈಸೂರಿಗೆ ಎರಡನೇ ಹಂತದ ಗಜಪಡೆ ಆಗಮಿಸಲಿವೆ.

ಈ ಬಾರಿಯ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸಲು 14 ಆನೆಗಳನ್ನು ಅರಣ್ಯ ಇಲಾಖೆ ಗುರುತಿಸಿದ್ದು, ಈಗಾಗಲೇ ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳು ಮೈಸೂರಿನಲ್ಲಿ ಬೀಡುಬಿಟ್ಟಿವೆ.

ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗೆ ತಾಲೀಮು ನಡೆಸಲಾಗುತ್ತಿದೆ. ಬೆಳಿಗ್ಗೆ ಹಾಗೂ ಸಂಜೆ ರಾಜಬೀದಿಯಲ್ಲಿ ಕ್ಯಾಪ್ಟನ್‌ ಅಭಿಮನ್ಯುವನ್ನು ನೋಡಲು ಜನರು ಜಮಾಯಿಸುತ್ತಾರೆ.

ಇನ್ನು ಸೆಪ್ಟೆಂಬರ್.‌5 ರಂದು ಮೈಸೂರಿಗೆ ಎರಡನೇ ಹಂತದಲ್ಲಿ ದುಬಾರೆ ಆನೆ ಶಿಬಿರದಿಂದ ಪ್ರಶಾಂತ್‌, ಸುಗ್ರೀವಾ, ಮತ್ತಿಗೋಡು ಆನೆ ಶಿಬಿರದಿಂದ ಮಹೇಂದ್ರ, ದೊಡ್ಡ ಹರವೇ ಶಿಬಿರದಿಂದ ಲಕ್ಷ್ಮೀ, ರಾಮಂಪುರ ಆನೆ ಶಿಬಿರದಿಂದ ಈರಣ್ಯ ಆನೆಗಳು ಆಗಮಿಸಲಿವೆ.

ಈ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಹೆಚ್ಚುವರಿ ಗಜಪಡೆ, ಕಾವಾಡಿ, ಮಾವುತರಿಗಾಗಿ ತಂಗುದಾಣ ನಿರ್ಮಾಣ ಮಾಡಲಾಗುತ್ತಿದೆ. ಆನೆಗಳ ವಾಸ್ತವ್ಯಕ್ಕೂ ಹೆಚ್ಚುವರಿ ತಾತ್ಕಾಲಿಕ ಶೆಡ್‌ ನಿರ್ಮಾಣ ಕಾರ್ಯದಲ್ಲಿ ಕಾರ್ಮಿಕರು ಬ್ಯುಸಿಯಾಗಿದ್ದಾರೆ.

 

Tags: