Mysore
25
scattered clouds

Social Media

ಭಾನುವಾರ, 29 ಮಾರ್ಚ್ 2026
Light
Dark

ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧಗೊಳ್ಳುತ್ತಿದೆ ಸಾಂಸ್ಕೃತಿಕ ನಗರಿ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದೆ. ದಸರಾ ಕೆಲಸಗಳು ಭರದಿಂದ ಸಾಗುತ್ತಿವೆ.

ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿಯಿವೆ. ಈಗಿರುವಾಗಲೇ ಮೈಸೂರಿನಲ್ಲಿ ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿದ್ದು, ದಸರಾ ಬರುವ ಒಂದು ವಾರದ ಮುಂಚೆಯೇ ಎಲ್ಲಾ ಕೆಲಸಗಳು ಪೂರ್ಣಗೊಳ್ಳಲಿವೆ.

ಮೈಸೂರು ಅರಮನೆಯ ಸುತ್ತ ಮುತ್ತ ಬೆಳೆದಿರುವ ಗಿಡಗಂಟೆಗಳನ್ನು ಸಹ ಕ್ಲೀನ್‌ ಮಾಡಲಾಗಿದ್ದು, ಇನ್ನೇನು ಕೆಲ ದಿನಗಳಲ್ಲಿ ಅರಮನೆ ಸುತ್ತ ಪೇಂಟಿಂಗ್‌ ಸಹ ಮಾಡಲಾಗುತ್ತದೆ.

ಇನ್ನು ಅರಮನೆಯಲ್ಲಿ ಬೀಡುಬಿಟ್ಟಿರುವ ದಸರಾ ಗಜಪಡೆಗೆ ತಾಲೀಮು ನಡೆಸಲಾಗುತ್ತಿದ್ದು, ಕ್ಯಾಪ್ಟನ್‌ ಅಭಿಮನ್ಯು ಅಂಡ್‌ ಟೀಂ ಜಂಬೂಸವಾರಿಗೆ ಎಲ್ಲಾ ರೀತಿಯಲ್ಲೂ ಸಜ್ಜಾಗುತ್ತಿವೆ.

ಇದರ ಜೊತೆಗೆ ಮಾವುತರು ಹಾಗೂ ಕಾವಾಡಿಗರು ಕೂಡ ಜಂಬೂಸವಾರಿ ಮೆರವಣಿಗೆಗೆ ಸಜ್ಜಾಗುತ್ತಿದ್ದು, ಆನೆಗಳ ತಾಲೀಮಿನಲ್ಲಿ ಭಾಗಿಯಾಗಿ, ಪ್ರತೀ ತಾಲೀಮನ್ನೂ ಕೂಡ ಯಶಸ್ವಿಯಾಗಿಸುತ್ತಿದ್ದಾರೆ.

Tags:
error: Content is protected !!