ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ವಿಜಯದಶಮಿ ಜಂಬೂಸವಾರಿ ಮೆರವಣಿಗೆ ಮುಗಿದ ಬಳಿಕ ಪೌರ ಕಾರ್ಮಿಕರು ಕಸ ತೆರವುಗೊಳಿಸಿದ್ದಾರೆ.
ಜಂಬೂಸವಾರಿ ಮೆರವಣಿಗೆ ಬಳಿಕ ಇಡೀ ಮೈಸೂರು ನಗರ ಪ್ಲಾಸ್ಟಿಕ್ ಮಯವಾಗಿತ್ತು. ಅದರಲ್ಲೂ ಮುಖ್ಯವಾಗಿ ಜಂಬೂಸವಾರಿ ಸಾಗಿದ ರಾಜಮಾರ್ಗದಲ್ಲಿ ಪ್ಲಾಸ್ಟಿಕ್ ರಾಶಿಯೇ ಕಂಡುಬಂದಿತ್ತು.
ಜಂಬೂಸವಾರಿ ಮುಗಿದ ಬಳಿಕ ಅಂದರೆ ಶನಿವಾರ ತಡರಾತ್ರಿಯಿಂದಲೇ ಸ್ವಚ್ಛತಾ ಕಾರ್ಯ ನಿರ್ವಹಿಸಿದ ಪೌರ ಕಾರ್ಮಿಕರು ಬರೋಬ್ಬರಿ ಒಂದಲ್ಲಾ ಎರಡಲ್ಲಾ ಬರೋಬ್ಬರಿ 80 ಟನ್‌ಗಳಷ್ಟು ಕಸ ಸಂಗ್ರಹಿಸಿದ್ದಾರೆ.
ಇದರಲ್ಲಿ 22 ಟನ್‌ಗಳಷ್ಟು ಕಸ ಪ್ಲಾಸ್ಟಿಕ್ ಕಸವಾಗಿದೆ ಎಂದು ತಿಳಿದುಬಂದಿದೆ.
ಇನ್ನು ಅರಮನೆ ಆವರಣ, ಜಂಬೂಸವಾರಿ ಮೆರವಣಿಗೆ ಮಾರ್ಗ, ಆಹಾರ ಮೇಳ, ಫಲಪುಷ್ಪ ಪ್ರದರ್ಶನ ಆಯೋಜಿಸಿದ್ದ ಸ್ಥಳಗಳಲ್ಲಿ ಬಹಳಷ್ಟು ಕಸ ಸಂಗ್ರಹವಾಗಿದ್ದು, ಪೌರ ಕಾರ್ಮಿಕರು ನಗರವನ್ನು ಸ್ವಚ್ಛ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.