ಮೈಸೂರು: ವಿಶ್ವ ವಿಖ್ಯಾತ ದಸರಾ ಮಹೋತ್ಸವ ಪ್ರಯುಕ್ತ ಯುವ ದಸರಾವನ್ನು ಅದ್ದೂರಿಯಾಗಿ ಅ.6 ರಿಂದ 10 ರವರೆಗೆ ಉತ್ತನಹಳ್ಳಿ ತ್ರಿಪುರ ಸುಂದರಿ ದೇವಸ್ಥಾನದ ಬಳಿ ಇರುವ ಯಾಲಿಗೆಹುಂಡಿ ಹತ್ತಿರ ಮೈದಾನದಲ್ಲಿ ಆಯೋಜಿಸಲಾಗಿದೆ.
ಈ ಬಾರಿಯ ಯುವ ದಸರಾಗೆ ಖ್ಯಾತ ಬಹುಭಾಷಾ ಗಾಯಕರು, ಸಂಗೀತ ನಿರ್ದೇಶಕರಾದ ಎ.ಆರ್. ರಹಮಾನ್ ಮತ್ತು ಇಳಯರಾಜ ಆಗಮಿಸುತ್ತಿರುವುದು ವಿಶೇಷವಾಗಿದೆ. ಮೊದಲಿಗೆ ಶ್ರೇಯಾ ಘೋಷಾಲ್ ಕಾರ್ಯಕ್ರಮವಿರಲಿದ್ದು, ಯಾವ ದಿನದಂದು ಯಾವ ಕಲಾವಿದರು ಪ್ರದರ್ಶನ ನೀಡಲಿದ್ದಾರೆ ಎಂಬ ಮಾಹಿತಿ ಈ ಕೆಳಕಂಡಂತಿದೆ.
ಅ.6 – ಸಂಗೀತ ರಸಸಂಜೆ ಕಾರ್ಯಕ್ರಮಕ್ಕೆ ಬಹುಭಾಷಾ ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್,
ಅ.7 – ಸಂಗೀತ ಸಂಜೆ – ಸ್ಯಾಂಡಲ್‌ವುಡ್ ಸಂಗೀತ ನಿರ್ದೇಶಕ ರವಿ ಬಸ್ರೂರು
ಅ.8 – ಬಾಲಿವುಡ್ ನೈಟ್ಸ್ – ಬಾಲಿವುಡ್ ಗಾಯಕ ಬಾದ್‌ಷಾ
ಅ.9 – ಸಂಗೀತ ಸಂಜೆ – ಸಂಗೀತ ನಿರ್ದೇಶಕ ಮತ್ತು ಗಾಯಕ ಎ.ಆರ್.ರೆಹಮಾನ್
ಅ.10ರ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಖ್ಯಾತ ಸಂಗೀತ್ ನಿರ್ದೇಶಕ ಇಳಯರಾಜ
ಯುವ ಸಂಭ್ರಮದ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದ ಶಾಲಾ-ಕಾಲೇಜು ತಂಡಗಳು ಯುವ ದಸರಾ ಕಾರ್ಯಕ್ರಮದಲ್ಲಿಯೂ ಸಹ ನೃತ್ಯ ಪ್ರದರ್ಶನ ನೀಡುತ್ತವೆ.