ಮೈಸೂರು: ನಾಡಹಬ್ಬ ದಸರಾ ಹಿನ್ನೆಲೆ ಗಜಪಡೆಗೆ ಇಂದು ( ಸೆಪ್ಟೆಂಬರ್ 26 ) ಕುಶಾಲತೋಪು ತಾಲೀಮು ನಡೆಸಲಾಯಿತು.
ಮೈಸೂರು ದಸರಾ ಜಂಬೂ ಸವಾರಿ ಸಲುವಾಗಿ ಕಾಡಿನಿಂದ ನಾಡಿಗೆ ಆಗಮಿಸಿರುವ ಎಲ್ಲಾ 14ಆನೆಗಳು ಕೂಡ ಇದರಲ್ಲಿ ಭಾಗಿಯಾಗಿದ್ದವು. ಇನ್ನು ಕುಶಾಲು ತೋಪು ಸಿಡಿಸುವಾಗ ಯಾವುದೇ ಆನೆ ಶಬ್ದಕ್ಕೆ ಬೆಚ್ಚದೇ ಭಾಗವಹಿಸಿದವು.
ಏಕಲವ್ಯ ಆನೆ ಮೊದಲ ಬಾರಿ ಆಗಮಿಸಿದ್ದರೂ ಸಹ ಬೆಚ್ಚದೇ ನಿಂತಿತ್ತು. ಕುಶಾಲತೋಪು ಯಶಸ್ವಿಯಾಗಿದ್ದು, ಎಲ್ಲಾ ಆನೆಗಳ ಆರೋಗ್ಯ ಕೂಡ ಚೆನ್ನಾಗಿದೆ. ಇನ್ನು ಎರಡು ಭಾರಿ ಕುಶಾಲತೋಪು ಸಿಡಿಸುವ ತಾಲೀಮು ನಡೆಸುತ್ತೇವೆ.
ಶ್ರೀರಂಗಪಟ್ಟಣ ದಸರಾಗೆ ಆನೆಗಳ ಆಯ್ಕೆ ವಿಚಾರವಾಗಿ ಮಹೇಂದ್ರ, ಹಿರಣ್ಯ ಲಕ್ಷ್ಮಿ ಆನೆಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಎಲ್ಲಾ ಆನೆಗಳ ಸಾಮರ್ಥ್ಯ ಪರೀಕ್ಷೆ ಮಾಡಿ ಮೂರು ಆನೆಗಳ ಪ್ರಸ್ತಾವನೆ ಕಳುಹಿಸಿದ್ದೇವೆ. ಫೈನಲ್ ಮಾಡುವ ಜವಾಬ್ದಾರಿ ಮೇಲ್ಮಟ್ಟದ ಅಧಿಕಾರಿಗಳ ಜವಾಬ್ದಾರಿ. ದಸರಾ ಜಂಬುಸವಾರಿಯಲ್ಲಿನ ನೌಪತ್ ಆನೆ, ನಿಶಾನೆ ಆನೆಗಳನ್ನ ಸದ್ಯದಲ್ಲೇ ಫೈನಲ್ ಮಾಡುತ್ತೇವೆ ಎಂದು ಡಿಸಿಎಫ್ ಡಾ ಪ್ರಭುಗೌಡ ಹೇಳಿಕೆ ನೀಡಿದರು.